ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅರ್ಚನಾ ಮರ್ಡರ್ ಕೇಸ್: ಅರ್ಚನಾ ಪುತ್ರಿ ಯುವಿಕಾ ಅರೆಸ್ಟ್-ನವೀನ್ 2ನೇ ಅಲ್ಲ 3ನೇ ಸಂಬಂಧ

ಬೆಂಗಳೂರು: ಹೊಸೂರು ರೋಡ್ ಸಿಗ್ನಲ್ ಬಳಿ ಡಿಸೆಂಬರ್-27 ರಂದು ನಡೆದ ಅರ್ಚನಾ ರೆಡ್ಡಿ ಮರ್ಡರ್ ಕೇಸ್ ಮತ್ತೊಂದು ಟ್ವಿಸ್‌ಟ್ ಸಿಕ್ಕಿದೆ. ಅಮ್ಮನ ಕೊಲೆಗೆ ಮಗಳು ಯುವಿಕಾನೇ ನವೀನ್‌ಗೆ ಸಾಥ್ ಕೊಟ್ಟಿದ್ದಳು ಅಂತಲೇ ಎಲೆಕ್ಟ್ರಾನಿಕ್ ಸಿಟಿಯ ಪೊಲೀಸರು ಈಗ ಅರ್ಚನಾ ರೆಡ್ಡಿ ಪುತ್ರಿ ಯುವಿಕಾಳನ್ನೂ ಬಂಧಿಸಿದ್ದಾರೆ.

ಅರ್ಚನಾ ರೆಡ್ಡಿ ಬರ್ಬರ ಹತ್ಯೆ ಪ್ರಕರಣ ನಿಜಕ್ಕೂ ಇಡೀ ಬೆಂಗಳೂರನ್ನ ಬೆಚ್ಚಿ ಬೀಳಸಿದೆ. ಈ ಮರ್ಡರ್ ಕೇಸ್ ಅನ್ನ ಭೇದಿಸುತ್ತಲೇ ಹೋಗ್ತಿರೋ ಪೊಲೀಸರಿಗೆ ಒಂದೊಂದೇ ಸತ್ಯ ಎದುರಾಗುತ್ತಿವೆ.

ಅರವಿಂದ್ ಅನ್ನೋರನ್ನ ಪ್ರೀತಿಸಿ ಅರ್ಚನಾ ರೆಡ್ಡಿ ಮದುವೆ ಆಗಿದ್ದಳು. 10 ವರ್ಷ ಸಂಸಾರವನ್ನೂ ಮಾಡಿದ್ದಳು ಅರ್ಚನಾ ರೆಡ್ಡಿ. ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಕೂಡ ಹುಟ್ಟಿದೆ. ಆದರೆ ಮೊದಲ ಪತಿ ಅರವಿಂದ್ ನಿಂದ ವಿಚ್ಛೇದನ ಪಡೆದು ಬರೋಬ್ಬರಿ 15 ಕೋಟಿ ಪರಿಹಾರವನ್ನೂ ಪಡೆದಿದ್ದಳು ಅರ್ಚನಾ.

ಅದೇ ದುಡ್ಡಿನಲ್ಲಿಯೇ ಆಸ್ತಿ-ಪಾಸ್ತಿ ರಿಯಲ್ ಎಸ್ಟೇಟ್ ಮಾಡಿಕೊಂಡು ಸಿದ್ದಿಕ್ ಅನ್ನೋ ವ್ಯಕ್ತಿ ಜೊತೆಗೆ 3 ವರ್ಷ ಲಿವಿಂಗ್ ಟು ಗೆದರ್ ಸಂಬಂಧದಲ್ಲಿಯೇ ಇದ್ದಳು ಅರ್ಚನಾ. ಆದರೆ ಇಬ್ಬರ ನಡುವೆ ಜಗಳವಾಗಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಕೂಡ ಏರಿದ್ದಳು ಅರ್ಚನಾ. ಆಗಲೇ ಪರಿಚಯವಾಗಿದ್ದ ಈ ನವೀನ್.

ಹೌದು ಇದೇ ನವೀನ್ ಜೊತೆಗೆ ಅರ್ಚನಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ನವೀನ್ ಅಮ್ಮನೂ ಇರಲಿ ಮಗಳ ಯುವಿಕಾನೂ ಇರಲಿ ಅಂತಲೇ ಇಬ್ಬರ ಜೊತೆಗೂ ಇದ್ದ. ಅದು ಅರ್ಚನಾಗೆ ತಿಳಿದು ಸಿಟ್ಟು ಕೂಡ ಮಾಡಿಕೊಂಡಿದ್ದಳು.ಆದರೆ ಈ ಮಧ್ಯೆ ನವೀನ್ ಗೆ ಗೊತ್ತಿರುವ ರೌಡಿ ರೋಹಿತ್ ಅರ್ಚನಾಳಿಗೆ ಹತ್ತಿರವಾಗಿದ್ದ. ಈ ವಿಷಯದಿಂದಲೂ ನವೀನ್ ಸಿಟ್ಟು ಮಾಡಿಕೊಂಡಿದ್ದ. ಹೀಗಿರೋವಾಗಲೇ ಅರ್ಚನಾಳನ್ನ ಕೊಂದು ಹಾಕಿದರೇ 40 ಕೋಟಿ ಆಸ್ತಿನೂ ಸಿಗುತ್ತದೆ.ಅರ್ಚನಾ ಮಗಳು ಯುವಿಕಾನೂ ಸಿಗ್ತಾಳೆ ಅಂತಲೇ ಅರ್ಚನಾ ಕೊಲೆ ಸಂಚು ರೂಪಿಸಿದ್ದ.

ಇದೇ ಡಿಸೆಂಬರ್-27 ರಂದು ಹೊಸೂರು ರೋಡ್ ಸಿಗ್ನಲ್ ಬಳಿ ಅರ್ಚನಾಳನ್ನ ನವೀನ್ ಸ್ನೇಹಿತ ಜತೆಗೆ ಸೇರಿ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಕೊಲೆಗೆ ಅರ್ಚನಾ ಮಗಳು ಯವಿಕಾನೂ ಸಾಥ್ ಕೊಟ್ಟಿದ್ದಾಳೆ. ಅಮ್ಮನ ಬಗ್ಗೆ ಎಲ್ಲ ರೀತಿಯ ಮಾಹಿತಿಕೊಟ್ಟು ನವೀನ್ ಕೊಲೆ ಸಂಚಿಗೆ ನೆರವಾಗಿದ್ದಾಳೆ. ಪೊಲೀಸರು ಈಗ ಯುವಿಕಾಳನ್ನೂ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

Edited By : Nagesh Gaonkar
PublicNext

PublicNext

30/12/2021 05:05 pm

Cinque Terre

41.35 K

Cinque Terre

1

ಸಂಬಂಧಿತ ಸುದ್ದಿ