ಬೆಂಗಳೂರು: ಹೊಸ ವರ್ಷಾಚರಣೆಗೆ ಕಿಕ್ಕೇರಿಸಲು ಸಂಗ್ರಹಿಸಿಟ್ಟಿದ್ದ 80 ಲಕ್ಷ ಮೌಲ್ಯ ವಿವಿಧ ಮಾದಕ ವಸ್ತುಗಳನ್ನ ಬೆಂಗಳೂರು ಸಿಸಿಬಿ ಪೊಲೀಸರು ಜಪ್ತಿ ಮಾಡಿ ಮೂವರು ನೈಜೇರಿಯನ್ ಮೂಲದವರನ್ನ ಬಂಧಿಸಿದ್ದಾರೆ.
ಬಂಧಿತರು ಬ್ಯುಸಿನೆಸ್ ವೀಸಾದಲ್ಲಿಯೇ ಭಾರತದಲ್ಲಿ ಬಂದು ನೆಲಸಿದ್ದರು.ಇಲ್ಲಿಯ ಬಾಗಲೂರಿನಲ್ಲಿಯೇ ಬಂದು ಇವರು ವಾಸವಾಗಿದ್ದರು. ಇವರಿಂದ ಪೊಲೀಸರು 400 ಗ್ರಾಂ ಎಂಡಿಎಂ 40 ಗ್ರಾಂ ಕೊಕೇನ್,400 ಗ್ರಾಂ ಹ್ಯಾಶ್ ಆಯಿಲ್, 40 ಫಿಯಾಮಾ ಸೋಪ್ ಬಾಕ್ಸ್, ತೂಕದ ಯಂತ್ರ, 5 ಮೊಬೈಲ್ಸ್ ಜಪ್ತಿ ಮಾಡಿದ್ದಾರೆ.
ಮುಂಬೈನಿಂದ ಮಾದಕ ವಸ್ತು ತರಿಸಿ ಮನೆಯಲ್ಲಿ ಇಟ್ಟಿದ್ದರು. ಇವರ ವಿರುದ್ಧ ಈಗ ಎನ್.ಡಿ.ಪಿ.ಎಸ್ ಹಾಗೂ ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
PublicNext
29/12/2021 08:50 am