ಬೆಂಗಳೂರು:ಕೆಲಸಕ್ಕೆ ಅಂತ ಮನೆಗೆ ಬಂದ ನರ್ಸ್ ಒಬ್ಬಳು ಕನ್ನ ಹಾಕಿ ರಾತ್ರೋ ರಾತ್ರಿ ಲಕ್ಷಂತರ ರೂಪಾಯಿ ಬೆಲೆಬಾಳು ಚಿನ್ನ ಕದ್ದು ಎಸ್ಕೇಪ್ ಆದ ಘಟನೆ ಅಮೃತಹಳ್ಳಿ ವೆಂಕಟ ಲೇಔಟ್‌ನಲ್ಲಿ ನಡೆದಿದೆ.
ಮನೆಯ ಮಾಲೀಕರು ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ನೋಡಿಕೊಳ್ಳಲೆಂದೇ ಡಿ ನೋವಾ ಏಜೆನ್ಸಿ ಯಿಂದ ಪವಿತ್ರ ಎಂಬ ನರ್ಸ್ ನನ್ನ ನೇಮಕ ಮಾಡಿಕೊಂಡಿದ್ದರು.
ಆದರೆ ಡಿಸೆಂಬರ್-18 ರಂದು ರಾತ್ರಿ ನರ್ಸ್ ಪವಿತ್ರಾ, ಮನೆಯ ಕಬೋರ್ಡ್ ನಲ್ಲಿದ್ದ ನಾಲ್ಕೂವರೆ ಲಕ್ಷದ ಬೆಲೆಬಾಳು ಚಿನ್ನವನ್ನ ಕದ್ದು ಎಸ್ಕೇಪ್ ಆಗಿದ್ದಳು. ತಾಯಿಗೆ ಹುಷಾರಿಲ್ಲ ಅಂತಲೂ ನೆಪ ಮನೆ ಮಾಲೀಕರಿಂದ ಹಣ ಪಡೆದು ಹೋಗಿದ್ದಳು. ಆದರೆ ಈಗ ಅಮೃತಹಳ್ಳಿ ಪೊಲೀಸರು ನರ್ಸ್‌ಳನ್ನ ಬಂಧಿಸಿದ್ದಾರೆ.
PublicNext
27/12/2021 12:13 pm