ಬೆಂಗಳೂರು: ಸಣ್ಣ-ಪುಟ್ಟ ಜಗಳಗಳು ಎಂತ ಅವಾಂತರಗಳಿಗೆ ಕಾರಣವಾಗುತ್ತವೆ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ.
ನಿದ್ರಿಸುತ್ತಿದ್ದ ವಾಚ್ ಮ್ಯಾನ್ ಮೇಲೆ ನೀರು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ನಡೆದ ಜಗಳ ತಾರಕಕ್ಕೇರಿದೆ. ಈ ವೇಳೆ ರಾಜೇಶ್ ಶ್ಯಾಂ ಎಂಬಾತ ಡ್ರೈವರ್ ಸಂತೋಷ್ ಅವರ ತುಟಿ ಕಚ್ಚಿ ತುಂಡರಿಸಿದ್ದಾನೆ. ಈ ಘಟನೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ನಡೆದಿದ್ದು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಆರೋಪಿ ರಾಜೇಶ್ ಶ್ಯಾಂನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Kshetra Samachara
26/12/2021 11:02 pm