ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತ್ಯಾಜ್ಯ ವಿಲೇವಾರಿ ಕಾರ್ಯದ ಹಣ ಬಿಡುಗಡೆ ಕಾರ್ಯದಲ್ಲಿ ಹತ್ತಾರು ಕೋಟಿ ರೂಪಾಯಿ ವಂಚನೆ...?

ಬೆಂಗಳೂರು: 2018 ರ ಜನವರಿ ತಿಂಗಳಿನಿಂದ ಪೌರಕಾರ್ಮಿಕರ ಹಣ ಪಾವತಿಯನ್ನು ನೇರವಾಗಿ ಪಾಲಿಕೆಯು ಮಾಡುತ್ತಿದ್ದು, ಕೇವಲ ವಾಹನಗಳು ಅಂದರೆ - ಕಾಂಪ್ಯಾಕ್ಟರ್ ಗಳು ಮತ್ತು ಟಿಪ್ಪರ್ ಆಟೋರಿಕ್ಷಾಗಳ ಸರಬರಾಜು ಕಾರ್ಯವನ್ನು ಹಾಗೂ ಇದ್ದಕ್ಕೆ ಬೇಕಿರುವ ಚಾಲಕರು ಮತ್ತು ಸಹಾಯಕರ ಪೂರೈಕೆ, ಸರಬರಾಜು ಕಾರ್ಯವನ್ನು ಮಾತ್ರವೇ ಗುತ್ತಿಗೆದಾರರು ಮಾಡಬೇಕಿರುವುದು ಸರಿಯಷ್ಟೇ.

ಅದರಂತೆ, ವಾರ್ಡ್ ಸಂಖ್ಯೆ 118 ರಲ್ಲಿ ಮೆ|| ಎಸ್. ಆರ್. ಪಿ. ಕಾರ್ಪೋರೇಷನ್ ಸಂಸ್ಥೆ ಹಾಗೂ ವಾರ್ಡ್ ಸಂಖ್ಯೆ 119 ರಲ್ಲಿ ಮೆ|| ಪ್ರಕೃತಿ ಎಂಟರ್ ಪ್ರೈಸಸ್ ಸಂಸ್ಥೆಯವರು ಪ್ರಥಮ ಮತ್ತು ದ್ವಿತೀಯ ಹಂತದ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆಗಾಗಿ ಸರಬರಾಜು ಆದೇಶವನ್ನು ಪಡೆದಿದ್ದು, ಸರಬರಾಜು ಆದೇಶದಂತೆ ವಾರ್ಡ್ ಸಂಖ್ಯೆ 118 ರಲ್ಲಿ 21 ಟಿಪ್ಪರ್ ಆಟೋಗಳು ಹಾಗೂ ವಾರ್ಡ್ ಸಂಖ್ಯೆ 119 ರಲ್ಲಿ 34 ಟಿಪ್ಪರ್ ಆಟೋಗಳನ್ನು ಬಳಸಿಕೊಂಡು, ತ್ಯಾಜ್ಯ ವಿಲೇವಾರಿ ಕಾರ್ಯ ಮಾಡುತ್ತಿದ್ದೇವೆಂಬ ತಪ್ಪು ಮಾಹಿತಿಯನ್ನು ನೀಡಿ, ಹಣ ಬಿಡುಗಡೆ ಮಾಡಿಸಿಕೊಳ್ಳುತ್ತಿರುವ ಕಾರ್ಯ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.

ಈ ಕುರಿತು ಬಿಜೆಪಿ ಬೆಂಗಳೂರು ನಗರ ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್ ಆರ್ ರಮೇಶ್ ದಾಖಲೆ ಬಿಡುಗಡೆ ಮಾಡಿದರು.

ಆದರೆ, ಸದರಿ ಗುತ್ತಿಗೆದಾರರು ಪೂರೈಕೆ ಮಾಡಬೇಕಿರುವ ಒಟ್ಟು ವಾಹನಗಳ ಪೈಕಿ ಶೇ. 50 ರಷ್ಟು ವಾಹನಗಳೂ ಸಹ ಕಾರ್ಯ ನಿರ್ವಹಣೆ ಮಾಡದಿರುವ ವಿಷಯ RFID ದಾಖಲೆಗಳಿಂದ ಸ್ಪಷ್ಟವಾಗಿ ತಿಳಿದುಬಂದಿರುತ್ತದೆ.

ಆಯಾ ವಾರ್ಡ್ ನ ಕಿರಿಯ ಆರೋಗ್ಯ ಪರಿವೀಕ್ಷಕರು (Junior Health Inspector), ತದ ನಂತರ ಚಿಕ್ಕಪೇಟೆ ವಿಭಾಗದ ಘನತ್ಯಾಜ್ಯ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು RFID ದಾಖಲೆಗಳ ಅನ್ವಯವೇ ಹಣ ಬಿಡುಗಡೆಗೆ ಶಿಫಾರಸ್ಸು ಮಾಡಬೇಕಿರುತ್ತದೆ. ತದ ನಂತರ ದಕ್ಷಿಣ ವಲಯದ ಅಧೀಕ್ಷಕ ಅಭಿಯಂತರರು ದಾಖಲೆಗಳನ್ನು ಸಂಪೂರ್ಣ ಪರಿಶೀಲನೆ ಮಾಡಿದ ನಂತರವಷ್ಟೇ ಅದನ್ನು ಉಪ ಹಣಕಾಸು ನಿಯಂತ್ರಕರ ಕಛೇರಿಗೆ ಗುತ್ತಿಗೆ ಹಣ ಬಿಡುಗಡೆಗೆ ಶಿಫಾರಸ್ಸು ಮಾಡಬೇಕಿರುತ್ತದೆ.

ಆದರೆ, ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, RFID ದಾಖಲೆಗಳಲ್ಲಿ ಈ ಎರಡು ವಾರ್ಡ್ ಗಳಲ್ಲಿ ಕಾರ್ಯ ನಿರ್ವ ಹಿಸಬೇಕಿರುವ ಒಟ್ಟು ವಾಹನಗಳ ಸಂಖ್ಯೆಯ ಶೇ. 50 ರಷ್ಟು ವಾಹನಗಳೂ ಸಹ ಕಾರ್ಯ ನಿರ್ವಹಿಸದೇ ಇರುವುದು ಮತ್ತು ನಿರಂತರವಾಗಿ ಹಲವು ವಾಹನಗಳು ಗೈರಾಗುತ್ತಿರುವ ದಾಖಲೆಗಳಿದ್ದರೂ ಸಹ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಮತ್ತು ಗುತ್ತಿಗೆದಾರರ ಹಣಕಾಸು ಪ್ರಭಾವಗಳಿಗೆ ಒಳಗಾಗಿ ಪೂರ್ತಿ ಹಣ ಬಿಡುಗಡೆಗೆ ಶಿಫಾರಸ್ಸು ಮಾಡಿರುವುದು ಅತ್ಯಂತ ಸ್ಪಷ್ಟವಾಗಿರುತ್ತದೆ.

ಅಕ್ರಮವಾಗಿ ಪ್ರತಿ ತಿಂಗಳಿಗೆ ವಾರ್ಡ್ ಸಂಖ್ಯೆ 118 ಕ್ಕೆ ಮೆ|| ಎಸ್. ಆರ್. ಪಿ. ಕಾರ್ಪೋರೇಷನ್ ಸಂಸ್ಥೆಗೆ ತಲಾ ₹. 16,90,851/- ರೂಪಾಯಿಗಳನ್ನು ಹಾಗೆಯೇ, ವಾರ್ಡ್ ಸಂಖ್ಯೆ 119 ರ ಗುತ್ತಿಗೆದಾರರಾದ ಮೆ|| ಪ್ರಕೃತಿ ಎಂಟರ್ ಪ್ರೈಸಸ್ ಸಂಸ್ಥೆಗೆ ಪ್ರತಿ ತಿಂಗಳು ತಲಾ ₹. 33,33,787/- ರೂಪಾಯಿಗಳಷ್ಟು ಹಣವನ್ನು ನಿರಂತರವಾಗಿ ಪಾವತಿ ಮಾಡಲಾಗುತ್ತಿದೆ ಎಂದು ಎನ್ ಆರ್ ರಮೇಶ್ ದೂರಿದರು.

ಒಟ್ಟಾರೆ ಕಳೆದ 46 ತಿಂಗಳುಗಳ ಪೈಕಿ 40 ತಿಂಗಳ ಗುತ್ತಿಗೆ ಮೊತ್ತವನ್ನು ಸಂಪೂರ್ಣವಾಗಿ ವಾರ್ಡ್ ಸಂಖ್ಯೆ 118 ರ ಗುತ್ತಿಗೆದಾರರಿಗೆ ಒಟ್ಟು ₹. 6,76,34,040 ರೂಪಾಯಿಗಳು ಹಾಗೂ ವಾರ್ಡ್ ಸಂಖ್ಯೆ 119 ರ ಗುತ್ತಿಗೆದಾರರಿಗೆ ಒಟ್ಟು ₹. 13,33,51,480 ರೂಪಾಯಿಗಳಷ್ಟು ಹಣ ಗುತ್ತಿಗೆದಾರರ ಕೈ ಸೇರಿರುತ್ತದೆ ಎಂದು ದೂರಿದರು.

Edited By : Nagesh Gaonkar
Kshetra Samachara

Kshetra Samachara

23/12/2021 02:25 pm

Cinque Terre

764

Cinque Terre

0

ಸಂಬಂಧಿತ ಸುದ್ದಿ