ಖರ್ಚಿಗೆ ಕಾಸಿಲ್ಲ ಅಂತ ಸ್ನೇಹಿತರ ಜೊತೆಗೆ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿದ್ದ ವ್ಯಕ್ತಿಯ ಶವ ಸತತ 8 ಗಂಟೆಯ ಕಾರ್ಯಾಚರಣೆ ಬಳಿಕ ಪತ್ತೆ ಆಗಿದೆ.
ಬೆಂ.ಉತ್ತರ ತಾಲೂಕು ಹೆಸರಘಟ್ಟರಸ್ತೆಯ ಶ್ಯಾಮಭಟ್ಟರಪಾಳ್ಯದ ತಾವರೆಕಟ್ಟೆ ಬಳಿಯ ಕೆರೆಯಲ್ಲಿ ಮುಳುಗಿದ್ದ ಹೆಸರಘಟ್ಟ ಮೂಲದ 45 ವರ್ಷದ ಶೆಟ್ಟಳಪ್ಪ ಶವ ಪತ್ತೆಗೆ ಪೀಣ್ಯ ಹಾಗೂ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಯ ಜಂಟಿ ಕಾರ್ಯಚರಣೆ ನಡೆಸಿದ್ದರು. ಸ್ಥಳೀಯ ಮೀನುಗಾರರ ಸಹಾಯದಿಂದ ಸಂಜೆ ವೇಳೆಗೆ ಮೃತದೇಹವನ್ನ ಹೊರ ತೆಗೆದಿದ್ದಾರೆ
ಶೆಟ್ಟಳಪ್ಪ ಜೀವನ ನಡೆಸೋಕೆ ಅಂತ ಸರಿಯಾದಂತ ಕೆಲ್ಸ ಕಾರ್ಯ ಏನು ಮಾಡ್ತಾ ಇರ್ಲಿಲ್ಲ. ಸಿಕ್ಕಷ್ಟು ಕೂಲಿ ನಾಲಿ ಮಾಡ್ಕೊಂಡು ದುಡಿದ್ದ ದುಡ್ಡನ್ನೆಲ್ಲ ಕುಡಿದು ಖಾಲಿ ಮಾಡ್ಕೊಂತಿದ್ದ.ಆದ್ರೆ ಕಳೆದ ವಾರ ಸರಿಯಾಗಿ ಕೆಲಸಾನು ಇರ್ಲಿಲ್ಲ, ಅದಕ್ಕೆ ಎಣ್ಣೆ ಕುಡಿಯೋಕೆ ಹಣ ಹೊಂದಿಸಿಕೊಳ್ಳಲು ಮೀನು ಹಿಡಿಯಲು ಮೃತ ಶೆಟ್ಟಳಪ್ಪ ಮುಂದಾಗಿದ್ದ.ಹೊಟ್ಟೆಗೆ ಟೈರ್ ಟ್ಯೂಬ್ ಹಾಕೊಂಡು ಈಜಲು ಹೋಗಿ ಟ್ಯೂಬ್ ಮುಗುಚಿಕೊಂಡು ನೀರಿನಲ್ಲಿ ಮುಳುಗಿ ಶೆಟ್ಟಳಪ್ಪ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
12/12/2021 09:08 pm