ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿದ ಮೀನುಗಾರ-ಇನ್ನೂ ಪತ್ತೆ ಆಗದ ಕಳೇಬರ

ನೆಲಮಂಗಲ: ಮೀನು ಹಿಡಿಯಲು ಬಲೆ ಹಾಕಲು ಹೋಗಿ ವ್ಯಕ್ತಿ ಕೆರೆಯಲ್ಲಿ ಮುಳುಗಿದ ಘಟನೆ ಶ್ಯಾಮಭಟ್ಟರಪಾಳ್ಯ ತಾವರೆಕಟ್ಟೆಯಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನ ಹೆಸರಘಟ್ಟದ ಶೆಟ್ಟಳಪ್ಪ (45) ಎಂದು ಹೇಳಲಾಗಿದೆ. ಆದರೆ ಕೆರೆಯಲ್ಲಿ ಮುಳುಗಿದ ಮೃತದೇಹ ಇನ್ನೂ ಪತ್ತೆ ಆಗಿಯೇ ಇಲ್ಲ.

ನೆಲಮಂಗಲದ ಅಗ್ನಿಶಾಮಕ ದಳದ ಸಿಬ್ಬಂದಿ ರಬ್ಬರ್ ಬೋಟ್ ಬಳಸಿ ಮೃತದೇಹದ ಪತ್ತೆ ಶೋಧಕಾರ್ಯ ನಡೆಸಿದ್ದಾರೆ. ನೆಲಮಂಗಲ ಹಾಗೂ ಪೀಣ್ಯಾ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮಾಡುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

12/12/2021 03:05 pm

Cinque Terre

918

Cinque Terre

0

ಸಂಬಂಧಿತ ಸುದ್ದಿ