ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮ ಕಟ್ಟಡ ತೆರವಿಗೆ ಮೂರು ತಿಂಗಳ ಕಾಲಾವಕಾಶ: ಹೈಕೋರ್ಟ್

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ತೆರವು ಕುರಿತಂತೆ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ ಇತ್ತು. ಮುಖ್ಯ ನ್ಯಾ. ರಿತುರಾಜ್ ಅವಸ್ತಿ ಹಾಗೂ ನ್ಯಾ.ಸಚಿನ್ ಶಂಕರ್ ನೇತೃತ್ವದ ಪೀಠಕ್ಕೆ ಅಕ್ರಮ ಕಟ್ಟಡಗಳ ಪಟ್ಟಿಯನ್ನು ಬಿಬಿಎಂಪಿ ನೀಡಿತು. ಆ ಸಂದರ್ಭದಲ್ಲಿ ಪ್ರಭಾವಿಗಳಿಗೆ ಮಣಿಯದೇ, ಕೇವಲ ಕಾಗದದ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ವಾಸ್ತವಾಗಿ ಕ್ರಮ ತೆಗೆದುಕೊಳ್ಳಿ ಎಂದು ಕೋರ್ಟ್ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ನಿರ್ದೇಶನ ನೀಡಿದೆ.

ಇನ್ನೂ ವಿಚಾರಣೆ ವೇಳೆ ಹಾಜರಾದ ಬಿಬಿಎಂಪಿ ಚೀಫ್ ಕಮಿಷನರ್ ಕೋರ್ಟ್‌ಗೆ ಪ್ರಮಾಣ ಪತ್ರ ನೀಡಿದ್ದಾರೆ. 2020ರ ನಂತರ 8,496 ಕಟ್ಟಡ ನಕ್ಷೆ ನೀಡಲಾಗಿದೆ. ಇದರಲ್ಲಿ 5341 ಕಟ್ಟಡಗಳು ನಕ್ಷೆ ಉಲ್ಲಂಘನೆ ಮಾಡಿದೆ. ಈ ಸಂಬಂಧ 2,656 ಕಟ್ಟಡ ಮಾಲೀಕರಿಗೆ ನೊಟೀಸ್ ನೀಡಲಾಗಿದೆ. ಬೆಂಗಳೂರು ಬರೋಬ್ಬರಿ 1,31,745 ಸರ್ವೇ ನಡೆಸಲಾಗಿದೆ ಎಂದು ಕೋರ್ಟ್‌ಗೆ ಪಾಲಿಕೆ ವಿವರ ನೀಡಿದೆ.

ಮೂರು ತಿಂಗಳ ಕಾಲಾವಕಾಶ ನೀಡಿರುವ ಕೋರ್ಟ್ ಅಕ್ರಮ ಕಟ್ಟಡ ಡೆಮಾಲಿಷನ್ ಮಾಡಿ ಸಮಗ್ರ ವರದಿ ನೀಡುವಂತೆ ಕೋರ್ಟ್ ನಿರ್ದೇಶನ ನೀಡಿದೆ.

Edited By : Vijay Kumar
Kshetra Samachara

Kshetra Samachara

09/12/2021 10:15 pm

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ