ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾತ್ರೋ ರಾತ್ರಿ ಹುಂಡಿ ಎಗರಿಸಿ ಪರಾರಿ,ಸಿಸಿಟಿವಿ ಯಲ್ಲಿ ದೃಶ್ಯ ಸೆರೆ

ಬೆಂಗಳೂರು: ನಗರದ ಹೆಬ್ಬಾಳದ ಚೋಳನಾಯಕನಹಳ್ಳಿಯಲ್ಲಿ ನಿನ್ನೆ ತಡರಾತ್ರಿ 1:30 ರ ಸುಮಾರಿಗೆ ಇಬ್ಬರು ಕಳ್ಳರು ದೇವಾಲಯದ ಹುಂಡಿ ಹೊತ್ತೊಯ್ದಿರುವ ಕೃತ್ಯ ಇಲ್ಲಿಯ ಶಂಭುಲಿಂಗೇಶ್ವರ ಹಾಗೂ ಶನೇಶ್ವರ ದೇವಾಲಯದಲ್ಲಿ ನಡೆದಿದೆ.

ಕಳೆದ ಒಂದು ವರ್ಷದಿಂದ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿರಲಿಲ್ಲ. ಹುಂಡಿಯಲ್ಲಿ ತುಂಬಾ ಹಣ ಇತ್ತು ಎಂದು ಅಂದಾಜಿಸಲಾಗಿದೆ.

ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಹೆಬ್ಬಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗಾಗಿ ಖಾಕಿ ಪಡೆ ಬಲೆಬೀಸಿದೆ.

Edited By : Shivu K
Kshetra Samachara

Kshetra Samachara

08/12/2021 04:15 pm

Cinque Terre

408

Cinque Terre

0

ಸಂಬಂಧಿತ ಸುದ್ದಿ