14 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡ ಆರೋಪದ ಮೇಲೆ ಯಲಹಂಕ ನ್ಯೂ ಟೌನ್ ಪೊಲೀಸರು ಉದ್ಯಮಿಯೊಬ್ಬರನ್ನು ಬಂಧಿಸಿದ್ದಾರೆ. ಇನ್ನು ಮನೆಗೆಲಸಕ್ಕೆ ಇದ್ದ ಬಾಲಕಿಯನ್ನು ರಕ್ಷಿಸಲಾಗಿದೆ.
ಯಲಹಂಕದ CRPFನ ಕ್ವಾರ್ಟರ್ಸ್‌ನ ಮನೆಯೊಂದರಲ್ಲಿ ಈ ಬಾಲಕಿಯನ್ನು ಮನೆಗೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಅಡಿ ಉದ್ಯಮಿ ರಾಜಪ್ರಸಾದ್‌ನನ್ನು ಬಾಲನ್ಯಾಯ ಕಾಯ್ದೆಯಡಿ ಬಂಧಿಸಲಾಗಿದೆ. ಇವರ ಪತ್ನಿ ಸಿಆರ್‌ಪಿಎಫ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅಪ್ರಾಪ್ತೆಯನ್ನು ಮನೆಗೆಲಸಕ್ಕೆ ಇಟ್ಟುಕೊಂಡಿರುವ ಬಗ್ಗೆ ತಿಳಿದ ಎನ್‌ಜಿಒ, ಸಿಆರ್‌ಪಿಎಫ್ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಅವರ ಸಹಾಯದಿಂದ ಆರೋಪಿಯ ಮನೆಯಲ್ಲಿ ಬಾಲಕಿಯನ್ನು ಪತ್ತೆ ಮಾಡಿದ್ದಾರೆ.
Kshetra Samachara
05/12/2021 09:04 pm