ಬೆಂಗಳೂರು: ಭ್ರಷ್ಟಾಚಾರ ತವರುಮನೆ ಆಗಿರುವ BDA ಕಚೇರಿ ಮೇಲೆ ಇಂದು ಕೂಡ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮತ್ತೆ ತಮ್ಮ ಕಾರ್ಯ ಮುಂದುವರೆಸಿರುವ 50ಕ್ಕೂ ಹೆಚ್ಚು ಅಧಿಕಾರಿಗಳು ನಿನ್ನೆ ತಡರಾತ್ರಿಯವರೆಗೂ ದಾಳಿ ನಡೆಸಿ ವಾಪಸ್ ಆಗಿದ್ದರು.
ಕಳೆದ ದಿನ ಎಲ್ಲಾ ಕಛೇರಿಗಳನ್ನ ಬೀಗ ಹಾಕಿ ಕೀ ವಶಕ್ಕೆ ಪಡೆದಿದ್ದ ಅಧಿಕಾರಿಗಳು, ದಾಳಿ ವೇಳೆ ಕೆಲವು ಮಹತ್ವದ ದಾಖಲೆ ಪತ್ರಗಳನ್ನ ವಶಕ್ಕೆ ಪಡೆದಿದ್ರು ಎಂದು ಹೇಳಲಾಗುತ್ತಿದೆ. ದಾಖಲೆ ಪತ್ರಗಳ ಪರಿಶೀಲನೆ ಹಾಗೂ ಕೆಲವು ಕಡತಗಳು ನಾಪತ್ತೆ ಆಗಿರುವ ಬಗ್ಗೆ ಮಾಹಿತಿ ಇದೆ ಎನ್ನಲಾಗುತ್ತಿದೆ. ಅಲ್ಲದೆ ಕೆಲವು ಬ್ರೋಕರ್ ಗಳ ಬಳಿ ಸರ್ಕಾರಿ ಫೈಲ್‌ಗಳು ಇವೆ ಎನ್ನಲಾಗುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಶೋಧನೆ ನಡೆಸುತ್ತಿದ್ದಾರೆ.
Kshetra Samachara
20/11/2021 12:39 pm