ರಾಮಮೂರ್ತಿನಗರದ ಎನ್ ಆರ್ ಐ ಲೇಔಟ್ ನಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ಮದ್ಯಾಹ್ನ 12ಗಂಟೆ ವೇಳೆ ಮನೆ ಬಾಗಿಲು ಹಾಕಿದ್ದನ್ನ ನೋಡಿಕೊಂಡು ಕಳ್ಳರು ದರೋಡೆ ಮಾಡಿದ್ದಾರೆ.
ಇಂದು ಬೆಳಗ್ಗೆ 10ಗಂಟೆಗೆ ಮನೆ ಬಾಗಿಲು ಹಾಕಿಕೊಂಡು ಮಾಲಿಕರಾದ ಶಿವಾನಂದ್, ವೇದಾವತಿ ಸಂಬಂಧಿಕರ ಮನೆಗೆ ತೆರಳಿದ್ದರು.ಇದನ್ನು ಗಮನಿಸಿದ ಕಳ್ಳರು ಚಿನ್ನಾಭರಣ ಎಗರಿಸಿದ್ದಾರೆ.
ಮಧ್ಯಾಹ್ನ 1ಗಂಟೆಗೆ ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬಯಲಾಗಿದೆ. ಖದೀಮರು ಮನೆಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾರೆ. ಬೆಳ್ಳಿ ಆಭರಣ ಮುಟ್ಟದೇ ಕೇವಲ ಬಂಗಾರ ಮಾತ್ರ ಕದ್ದೊಯ್ದಿದ್ದಾರೆ.
ಇತ್ತೀಚೆಗೆ ಕೆಆರ್ ಪುರಂ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗ್ತಿದೆ. ಹಾಡಹಗಲೇ ಮನೆಗೆ ನುಗ್ಗಿ ಕಳ್ಳರು ಕೈ ಚಳಕ ತೋರಿಸುತ್ತಿದ್ದಾರೆ.ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಕಾರ್ಯೋನ್ಮುಖವಾಗಬೇಕಿದೆ.
Kshetra Samachara
14/11/2021 07:45 pm