ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದರೋಡೆಗೆ ಸ್ಕೆಚ್ ಹಾಕಿದ ರೌಡಿಗಳ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸರು

ಬೆಂಗಳೂರು: ನಗರದ ಸಿಸಿಬಿ ಪೊಲೀಸರಿಂದ ದರೋಡೆ ಮಾಡಲು ಸಜ್ಜಾಗಿದ್ದ ಬೊಮ್ಮನಹಳ್ಳಿ ರೌಡಿ ಶೀಟರ್ ಅಯ್ಯಪ್ಪ @ ಅಯ್ಯ ಹಾಗೂ ಆತನ 3 ಜನ ಸಹಚರರನ್ನು ಬಂಧಿಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ರೌಡಿ ಅಯ್ಯಪ್ಪ ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ರೌಡಿ ಅಸಾಮಿಯಾಗಿದ್ದು, ಈತನ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ, ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ 399, 402 ಐಪಿಸಿ ಪ್ರಕರಣಗಳು ದಾಖಲಾಗಿವೆ.

ಅಯ್ಯಪ್ಪನ ಸಹಚರ ಅಜಯ್ ಕುಮಾರ್,ಅಕ್ಷಯ ಕುಮಾರ್ ಹಾಗೂ ನವೀನ್ ನನ್ನು ಬಂಧಿಸಿದ್ದು ತನಿಖೆಯನ್ನ ಮುಂದುವರೆಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

13/11/2021 11:48 am

Cinque Terre

176

Cinque Terre

0

ಸಂಬಂಧಿತ ಸುದ್ದಿ