ಬೆಂಗಳೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀ ಕೀಗೆ ಬೆಂಗಳೂರಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಂಚಾರಿ ನ್ಯಾಯಾಲಯ-1 (MMTC-1) ಜಾಮೀನು ನೀಡಿ ಆದೇಶ ಹೊರಡಿಸಿದೆ.
ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಶ್ರೀಕೃಷ್ಣ ಹಾಗೂ ಭೀಮಾ ಜ್ಯುವೆಲ್ಲರಿ ಮಾಲೀಕನ ಮಗ ವಿಷ್ಣು ಭಟ್ ಹಲ್ಲೆ ಮಾಡಿದ್ದರು ಎಂದು ಹೊಟೇಲ್ ಸಿಬ್ಬಂದಿ, ಜೀವನ್ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದರು. ಶ್ರೀಕಿ ಮತ್ತು ವಿಷ್ಣುವನ್ನ ಬಂಧಿಸಿ ಶ್ರೀಕಿಯನ್ನ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದರು. ಇನ್ನೋರ್ವ ಆರೋಪಿ ವಿಷ್ಣುವನ್ನು ಕಸ್ಟಡಿಗೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ, ಜಾಮೀನಿನ ಮೇಲೆ ಹೊರ ಬಂದಿರುವ ಶ್ರೀಕಿ ಮೇಲೆ ರಾಷ್ಟ್ರೀಯ ತನಿಖಾ ದಳದ ಪೊಲೀಸರು ಹಾಗೂ ಅಂತಾರಾಷ್ಟ್ರೀಯ ಅಪರಾಧ ತಡೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
Kshetra Samachara
10/11/2021 10:40 am