ಬೆಂಗಳೂರು: ಬೈಕು, ಕಾರು ಕದ್ರೆ ಈಸಿಯಾಗಿ ಪೊಲೀಸ್ರು ಟ್ರೇಸ್ ಮಾಡ್ತಾರೆ. ಈ ಬೈಕೂ ಕಾರು ಕದಿಯೋದು ರಿಸ್ಕಿ ಕೆಲಸ .ಇದೇ ಕಾರಣಕ್ಕೆ ಇಲ್ಲೊಬ್ಬ ಕುಡುಕ ಮಹಾಶಯ ಎಣ್ಣೆ ಚಟಕ್ಕೆ ಹಣ ಹೊಂದಿಸಲು ಸೈಕಲ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ. ಸದ್ಯ ಈ ಸೈಕಲ್ ಕಳ್ಳನನ್ನ ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಾಲರಾಜ್ ಬಂಧಿತ ಆರೋಪಿಯಾಗಿದ್ದು, ಎಣ್ಣೆ ಚಟಕ್ಕೆ ದಾಸನಾಗಿದ್ದ ಬಾಲರಾಜ್ ಸೈಕಲ್ ಗಳನ್ನ ಕದ್ದರೆ ಯಾರೂ ದೂರು ಕೊಡುವುದಿಲ್ಲವೆಂದು ಕೊಟ್ರೂ ಪೊಲೀಸ್ರು ತಲೆಕೆಡಿಸಿಕೊಳ್ಳಲ್ಲ ಅಂತ ಸೈಕಲ್ ಗಳನ್ನೇ ಕಳ್ಳತನ ಮಾಡ್ತಿದ್ದ. ದುಬಾರಿ ಬೆಲೆಯ ಸೈಕಲ್‌ಗಳನ್ನ ಗುರಿಯಾಗಿಸಿಕೊಂಡು ಆಗ್ನೇಯ ವಿಭಾಗದ ವಿವಿಧೆಡೆ ದುಬಾರಿ ಮೌಲ್ಯದ ಸೈಕಲ್ ಗಳನ್ನ ಕದ್ದು ಕೇವಲ 2-3 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಮಾರಾಟ ಮಾಡಿ ಬಂದ ಹಣವನ್ನ ಮದ್ಯಪಾನದ ಚಟಕ್ಕೆ ಬಳಸಿಕೊಳುತ್ತಿದ್ದ.
ಆದ್ರೆ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಸೈಕಲ್ ಕಳ್ಳನ ಬಗ್ಗೆ ತಲೆಕೆಡಿಸಿಕೊಂಡು ಪ್ರಕರಣದ ಜಾಡು ಹಿಡಿದು ಕೊನೆಗೂ ಆರೋಪಿಯನ್ನ ಪತ್ತೆ ಮಾಡಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿ ಆರೋಪಿ ಬಾಲರಾಜ್‌ನನ್ನ ಬಂಧಿಸಿದ್ದು ಲಕ್ಷಾಂತರ ಮೌಲ್ಯದ 54 ಸೈಕಲ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
PublicNext
28/05/2022 04:27 pm