ಎಂಟು ವರ್ಷಗಳ ಸ್ನೇಹ ಸಂಬಂಧವಿದ್ದರೂ ಇಲ್ಲೊಬ್ಬ "ಗೆಳೆಯ" ಒಂದೂವರೆ ಲಕ್ಷ ಹಣವನ್ನು ಪಂಗನಾಮ ಹಾಕಿದ್ದಾನೆ. ಹಣ ಕೇಳಿದರೆ ಇಂದು, ನಾಳೆ ಅಂತ ಹೇಳಿ 4 ವರ್ಷಗಳಿಂದಲೂ ವಿಶೇಷಚೇತನನಿಗೆ ಕಾಗೆ ಹಾರಿಸ್ತಿದ್ದಾನೆ. ಅಷ್ಟಕ್ಕೂ ಏನು ಸ್ಟೋರಿ ಅಂತೀರಾ, ಇಲ್ಲಿ ನೋಡಿ...
ಹೀಗೆ ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿರುವ ಈ ವ್ಯಕ್ತಿಯ ಹೆಸರು ನಾಗರಾಜ್.
ಪಾವಗಡ ಮೂಲದ ಈತ ಬೊಮ್ಮಸಂದ್ರ ವಿನಾಯಕನಗರದಲ್ಲಿ ವಾಸವಾಗಿದ್ದು, ಜೀವನಕ್ಕಾಗಿ ಬೊಮ್ಮಸಂದ್ರ ಕೈಗಾರಿಕೆ ಪ್ರದೇಶದಲ್ಲಿರುವ ಜಾಕಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಅದೇ ಜಾಗದಲ್ಲಿ ಕೊಳ್ಳೇಗಾಲ ಮೂಲದ ರಮೇಶ್ ಎಂಬಾತನ ಪರಿಚಯ ಆಗಿದೆ. ನಾಗರಾಜ್ ಬಳಿ ರಮೇಶ "ಊರಲ್ಲಿ ಮನೆ ಕಟ್ತಿದ್ದೀನಿ" ಎಂದು ಹಣ ಕೊಡುವಂತೆ ಕೇಳಿದ್ದಾನೆ. ಅದರಂತೆ ವಿಶೇಷ ಚೇತನ ನಾಗರಾಜ್, ಆತನ ಅಣ್ಣ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಈತನಿಗೆ ಒಂದೂವರೆ ಲಕ್ಷ ರೂ. ಕೊಟ್ಟಿದ್ನಂತೆ.
ಆದರೆ, 4 ವರ್ಷ ಆದ್ರೂ ಸಹ ಹಣವನ್ನು ವಾಪಸ್ ಕೊಡದೆ ಸತಾಯಿಸ್ತಿದ್ದಾನೆ. ಹೀಗಾಗಿ ನ್ಯಾಯ ಕೊಡಿಸುವಂತೆ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡರು. ಇನ್ನು, ಈ ವಿಶೇಷ ಚೇತನನಿಗೆ ಕಣ್ಣು ಆಪರೇಷನ್ ಮಾಡಿಸಿಕೊಳ್ಳಲು ಸಾಕಷ್ಟು ಬಾರಿ ರಮೇಶ್ ಬಳಿ ಹಣ ಕೇಳಿದ್ರೂ, ವಂಚಕ ರಮೇಶ ಮಾತ್ರ ಇಂದು- ನಾಳೆ ಅಂತ ಬಡಪಾಯಿ ನಾಗರಾಜ್ ಗೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ.
-ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
09/09/2022 07:58 pm