ಪ್ರೀತಿ ಅಂದ್ರೆ ನಂಬಿಕೆ, ವಿಶ್ವಾಸ ಅಂತಾರೆ. ಅಂತಹ ಪ್ರೀತಿಯಲ್ಲಿ ಒಮ್ಮೆ ನಂಬಿಕೆ ಕೆಟ್ರೆ ಏನಾಗುತ್ತೆ ಅನ್ನೋದಕ್ಕೆ ಈ ಸ್ಟೋರಿನೆ ಸಾಕ್ಷಿ. ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿ ಸುಂದರವಾಗಿ ಜೀವನ ಕಳೆಯ ಬೇಕಿದ್ದ ಆ ಯುವಕ ಯುವತಿಯ ಜೋಡಿ ಮಧ್ಯೆ ಅನುಮಾನವೆಂಬ ಭೂತ ಇಬ್ಬರ ತಲೆಯಲ್ಲಿ ಹೊಕ್ಕಿದ್ದೇ ತಡ ಆ ಜೋಡಿ ಬೇರೆಯಾಗೋದಷ್ಟೇ ಅಲ್ಲದೇ ಪ್ರೀತಿಸಿದ ಯುವಕನ ಮೇಲೆಯೇ ಆ ಯುವತಿ ಆ್ಯಂಡ್ ಗ್ಯಾಂಗ್ ಹಲ್ಲೆ ನಡೆಸಿದೆ.
ಮಹದೇವ ಪ್ರಸಾದ್ ಎಂಬ ಯುವಕ ಹಾಗೂ ಕ್ಲಾರ್ ಎಂಬ ಯುವತಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿ ಲಿವ್ ಇನ್ ಟುಗೆದರ್ ನಲ್ಲಿ ವಾಸಿಸುತ್ತಿದ್ದರು.ಆದ್ರೆ ಅದ್ಯಾಕೋ ಗೊತ್ತಿಲ್ಲ. ಅದೇನೋ ಸುಖವಾಗಿ ಬಾಳು ನಡೆಸಬೇಕಿದ್ದ ಜೋಡಿಯಲ್ಲಿ ಅನುಮಾನದ ಹುತ್ತ ಬೆಳೆಯಲಾರಂಭಿಸಿತ್ತು. ಹೀಗೆ ಅನುಮಾನ ಶುರುವಾಗಿದ್ದೇ ಈ ಜೋಡಿ ಪ್ರತ್ಯೇಕವಾಗಿ ಜೀವನ ನಡೆಸಲು ಆರಂಭಿಸಿತ್ತು.
ಆದ್ರೆ ಕಳೆದ 10 ದಿನಗಳ ಹಿಂದೆ ಕ್ಲಾರಾ ಮಹದೇವಪ್ರಸಾದ್ ಗೆ ನಿನ್ನನ್ನು ನೋಡಬೇಕು ಎಂದು ಮನೆ ಹತ್ತಿರ ಕರೆಸಿಕೊಂಡಿದ್ದಳು. 11. 30 ರ ಸುಮಾರಿಗೆ ಮಹದೇವ ಪ್ರಸಾದ್ ಕ್ಲಾರಾ ಮನೆ ಬಳಿ ಬಂದಿದ್ದ.ಈ ವೇಳೆ ಕಾರಿನಲ್ಲಿ ಎಂಟ್ರಿ ಕೊಟ್ಟ ಪ್ರಿಯತಮೆ ಕ್ಲಾರಾ ಗುಂಪೊಂದು ಮಹದೇವ ಪ್ರಸಾದ್ ನನ್ನ ಅಪಹರಿಸಿ ಹಲ್ಲೆ ನಡೆಸಿದ ಬಳಿಕ ಮನೆಗೆ ತಂದು ಬಿಟ್ಟಿದ್ದಾರೆ.
ಪ್ರಕರಣ ಸಂಬಂಧ ಯುವಕ ಮಹದೇವ್ ಪ್ರಸಾದ್ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ಹನುಮಂತನಗರ ಪೊಲೀಸರು ಘಟನೆ ಸಂಬಂಧ ಕ್ಲಾರ ಸೇರಿದಂತೆ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
PublicNext
27/08/2022 07:57 pm