ಪರಿಚಿತರ ಮನೆಗೆ ತೆರಳಿ ಚಾರ್ಜರ್ ರೂಪದ ಸ್ಪೈ ಕ್ಯಾಮರಾ ಇಟ್ಟು ಮಹಿಳೆಯರ ನಗ್ನ ವೀಡಿಯೋ ಚಿತ್ರೀಕರಿಸಿ, ನಂತರ ಬ್ಲಾಕ್ಮೇಲ್ ಮಾಡ್ತಿದ್ದ ಮೈಸೂರಿನ ಟಿ.ನರಸೀಪುರದ ಮಹೇಶ್(30) ಎಂಬಾತನನ್ನ ಯಲಹಂಕದ CEN ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಸಂತ್ರಸ್ಥ ಮಹಿಳೆ ಮನೆಗೆ ತೆರಳಿದ್ದ ಮಹೇಶ್ ಚಾರ್ಜರ್ ರೂಪದ ಸ್ಪೈಕ್ಯಾಮರಾ ಅಳವಡಿಸಿದ್ದ. ಇದು ಚಾರ್ಜರ್ ಎಂದು ಭಾವಿಸಿದ್ದ ಮಹಿಳೆಯ ನಗ್ನ ವೀಡಿಯೋ ಚಿತ್ರೀಕರಣ ಆಗಿತ್ತು. ನಂತರ ತನ್ನ ಇನ್ಸ್ಟಾಗ್ರಾಂ ಪೇಜ್ ಮೂಲಕ ಮೆಸೇಜ್ ಮಾಡಿದ್ದ ಮಹೇಶ್ ಮಹಿಳೆನ ಚಾಟಿಂಗ್ ಸೆಳೆದು, ಲೈಂಗಿಕವಾಗಿ ಬಳಸಿಕೊಳ್ಳಲು ಯೋಚಿಸಿದ್ದ. ಮಹಿಳೆ ಸ್ಪಂದಿಸದಿದ್ದಾಗ, ನಗ್ನ ವೀಡಿಯೋನ ಮಹಿಳೆಗೆ ಕಳುಹಿಸಿದ್ದ. ಇದು ಅಸಲಿ ವೀಡಿಯೋ ಎಂದು ಗೊತ್ತಾದ ಕೂಡಲೇ ಮಹಿಳೆ ಗಾಬರಿಯಾಗಿ ಪೊಲೀಸರಿಗೆ ದೂರು ನೀಡಿದ್ದಳು. ದೂರಿನನ್ವಯ ಯಲಹಂಕ ಪೊಲೀಸರು ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
PublicNext
20/08/2022 05:19 pm