ಇದೇ ತಿಂಗಳ ಮೂರನೇ ತಾರೀಖು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಸದ್ಯ ಈ ಅಸಲಿ ಕಹಾನಿ ರಿವೀಲ್ ಆಗಿದೆ. ಕೆಂಗೇರಿ ಇನ್ಸ್ಪೆಕ್ಟರ್ ವಸಂತ್ ಅಂಡ್ ಟೀಂ ಕೊಲೆ ರಹಸ್ಯವನ್ನ ಭೇಧಿಸಿದ್ದಾರೆ. ಪತಿಯೇ ಪತ್ನಿಯ ಶೀಲ ಶಂಕಿಸಿ ಸ್ನೇಹಿತನ ಜೊತೆಗೂಡಿ ಕೊಲೆಗೈದಿದ್ದಾನೆ ಎಂಬ ಸತ್ಯ ತನಿಖೆಯಲ್ಲಿ ಬಯಲಾಗಿದೆ.
ಆರೋಪಿ ರಫೀಕ್ ಮೂಲತ: ಯಾದಗಿರಿ ಜಿಲ್ಲೆಯವನಾಗಿದ್ದು, ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ನಗೀನಾ ರಫೀಕ್ ಇಬ್ಬರಿಗೂ ಇದು ಎರಡನೇ ಮದುವೆ. ಮದುವೆಯಾದ ಆರಂಭದಲ್ಲಿ ಇಬ್ಬರು ಚೆನ್ನಾಗಿಯೇ ಇದ್ರು. ಆದ್ರೆ ಇತ್ತಿಚೇಗೆ ರಫೀಕ್ ಗೆ ಪತ್ನಿ ನಗೀನಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಶುರುವಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ನಗೀನಾ ಪರಪುರುಷನ ಜೊತೆಗಿರುವುದನ್ನು ಕಣ್ಣಾರೆ ಕಂಡಿದ್ದ. ಅದನ್ನ ಸ್ನೇಹಿತ ಪ್ರಜ್ವಲ್ ಬಳಿ ರಫೀಕ್ ಹೇಳಿದ್ದ. ಕೊನೆಗೆ ಇಬ್ಬರೂ ಸೇರಿ ನಗೀನಾಳನ್ನು ಮುಗಿಸಬೇಕು ಅಂತಾ ಪ್ಲಾನ್ ಮಾಡಿದ್ರು. ಇದೇ ತಿಂಗಳ 3 ನೇ ತಾರೀಖು ನಗೀನಾಗೆ ಕರೆ ಮಾಡಿದ್ದ ರಫೀಕ್ ನಾನು ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಕುಡಿದು ಬಿದ್ದಿದ್ದೇನೆ ಬಂದು ಕರೆದುಕೊಂಡು ಹೋಗು ಎಂದಿದ್ದ.
ನಗೀನಾ ಬಂದ ತಕ್ಷಣ ಆಕೆಗೆ ಮನಬಂದತೆ ಥಳಿಸಿದ್ದ. ಸ್ಥಳದಲ್ಲಿದ್ದ ಪ್ರಜ್ವಲ್ ಕೂಡ ರಫೀಕ್ ಗೆ ಸಾಥ್ ನೀಡಿ ನಗೀನಾ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ರು. ಹೆಣದ ಗುರುತು ಸಿಗಬಾರದು ಅಂತಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ರು. ಇನ್ನು ಪ್ರಕರಣ ಸಂಬಂಧ ರಫೀಕ್ ನನ್ನ ಮಗಳನ್ನು ಕೊಂದಿದ್ದಾನೆ ಎಂದು ನಗೀನಾ ತಂದೆ- ತಾಯಿ ಆರೋಪಿಸಿದ್ರು. ಇತ್ತ ಎಸ್ಕೇಪ್ ಆಗಿದ್ದ ರಫೀಕ್, ಗುರುತು ಸಿಗದಂತೆ ತಲೆ, ಮೀಸೆ ಗಡ್ಡ ಬೋಳಿಸಿಕೊಂಡಿದ್ದ. ಹೆಂಡತಿ ಮೊಬೈಲ್ ತೆಗೆದುಕೊಂಡು ಹೋಗಿ ಆಗಾಗ ಆಫ್ ಅಂಡ್ ಆನ್ ಮಾಡಿ ಪೊಲೀಸರ ದಾರಿ ತಪ್ಪಿಸಿದ್ದ. ಸದ್ಯ ಕೆಂಗೇರಿ ಪೊಲೀಸ್ರು ಇಬ್ಬರು ಕೊಲೆಗಡುಕರನ್ನ ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
PublicNext
12/07/2022 03:43 pm