ಕಳೆದ ಜುಲೈ 16ರಂದು ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯ ಗಂಟಿಗಾನಹಳ್ಳಿ ರಾಮಚಂದ್ರಪ್ಪನ ಮೇಲೆ ಹಲ್ಲೆ ಮಾಡಿ 20ಲಕ್ಷ ಹಂದಿಗಳ ಡಕಾಯಿತಿ ನಡೆದಿತ್ತು.
ಇನ್ನು ತೀವ್ರ ಹಲ್ಲೆಗೊಳಗಾದ ರಾಮಚಂದ್ರಪ್ಪ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಶಂಕರ್ ಮತ್ತು ಅಶೋಕ್ ಡಕಾಯಿತಿ ಮಾಡಿ ಹಂದಿಲೋಡ್ ಸಮೇತ ಎಸ್ಕೇಪ್ ಆಗಿದ್ದರು. ಈ ಘಟನೆ ಸಂಬಂಧ ಚಿಕ್ಕಜಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಚಿಕ್ಕಜಾಲ ಇನ್ಸ್ ಪೆಕ್ಟರ್ ಪ್ರವೀಣ್ ಮತ್ತವರ ತಂಡ ಡಿಸಿಪಿ ಅನೂಪ್ ಶೆಟ್ಟಿ ಮಾರ್ಗದರ್ಶನದಲ್ಲಿ ಡಕಾಯಿತರ ಬಂಧನಕ್ಕೆ ಬಲೆ ಬೀಸಿತ್ತು. ಇನ್ನು ದರೋಡೆಕೋರರನ್ನು ಬಂಧಿಸುವ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ ನಡೆದಿತ್ತು.
ಚೇಸಿಂಗ್ ಮಾಡುವಾಗ ಹಳ್ಳಕ್ಕೆ ಬಿದ್ದ ಪೊಲೀಸರ ಮೇಲೆಯೇ ಆರೋಪಿಗಳು ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಪ್ರವೀಣ್ ಮತ್ತವರ ತಂಡ ಪ್ರಾಣ ಪಣಕ್ಕಿಟ್ಟು ಗಂಗಾವತಿಯ ಕಾರಟಗಿ ಬಳಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಇನ್ನು ಪೊಲೀಸರಿಗೆ ಗೂಡ್ಸ್ ಗಾಡಿಯಲ್ಲಿ ಗುದ್ದಲು ಮುಂದಾದ ಆರೋಪಿಗಳನ್ನು ಪೊಲೀಸರು ಸಿನಿಮಾ ರೀತಿಯಲ್ಲಿ ಶೂಟೌಟ್ ಮಾಡಿ ಬಂಧಿಸಿದ್ದಾರೆ. ಈ ವೇಳೆ ಇನ್ಸ್ ಪೆಕ್ಟರ್
ಪ್ರವೀಣ್ , ವೆಂಕಟೇಶ್,ಪವಾರ್, ರವಿ,ಬಸವರಾಜ್, ವಿಜಿ,ಗಿರಿ, ಸಂತೋಷ್, ಮಹಾಂತೇಶ್,ರಾಜಕುಮಾರ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂಧನೆ ಸಲ್ಲಿಸಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
22/07/2022 01:46 pm