ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡೇ ಟೈಂ ನಲ್ಲಿ ಸ್ಕೆಚ್; ನೈಟ್ ಟೈಂ ನಲ್ಲಿ ಬೈಕ್ ಕ್ಯಾಚ್ ಗ್ಯಾಂಗ್ ಆಕ್ಟೀವ್

ನಗರದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ ಬೈಕ್ ವಾಚ್ ಮಾಡಿ ಸಂಜೆ ಬೈಕ್ ಕ್ಯಾಚ್ ಮಾಡೋ ಖತರ್ನಾಕ್ ಗ್ಯಾಂಗ್ ಆಕ್ಟೀವ್ ಆಗಿದೆ.

ಬೆಂಗಳೂರಿನ ಪೂರ್ವ ವಿಭಾಗದ ಈ ಗ್ಯಾಂಗ್ ಹೆಚ್ಚು ಆಕ್ಟೀವ್ ಆಗಿದ್ದು. ಮನೆ ಪಕ್ಕದಲ್ಲಿ ,ಪಾರ್ಕಿಂಗ್ ನಲ್ಲಿ ನಿಲ್ಲಿಸೋ ಬೈಕ್ ಗಳನ್ನ ಕ್ಷಣ ಮಾತ್ರದಲ್ಲಿ ಲಾಕ್ ಕಟ್ ಮಾಡಿ ಹೊತ್ತೊಯ್ತಾರೆ.

ಬೆಂಗಳೂರಿನ ಪುಲಿಕೇಶಿನಗರದಲ್ಲಿ ಬೈಕ್ ಹೊತ್ತೊಯ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಲೆಂಟಾಗಿ ಹೆಲ್ಮೆಟ್ ಹಾಕಿ ಬರೋ ಕಳ್ಳರು ಕ್ಷಣಮಾತ್ರದಲ್ಲಿ ಬೈಕ್ ಕದ್ದು ಎಸ್ಕೇಪ್ ಆಗ್ತಾರೆ.

ನೀವೆರನಾದ್ರು ಬೈಕ್ ಗೆ ಸೈಡ್ ಲಾಕ್, ಚೈನ್ ಏನೇ ಹಾಕಿದ್ರೂ ಅದನ್ನ ಬ್ರೇಕ್ ಮಾಡಿ ಬೈಕ್ ಕದ್ದೊಯ್ತಾರೆ. ಸದ್ಯ ಪೂರ್ವ ವಿಭಾಗದ ಪೊಲೀಸರು ಈ ಹಲ್ಮೆಟ್ ಬೈಕ್ ಕಳ್ಳರ ಹಿಂದೆ ಬಿದ್ದಿದ್ದಾರೆ.

Edited By :
PublicNext

PublicNext

25/06/2022 02:50 pm

Cinque Terre

26.45 K

Cinque Terre

0

ಸಂಬಂಧಿತ ಸುದ್ದಿ