ಇಲಿ ವಿಚಾರಕ್ಕಾಗಿ ಅಪಾರ್ಟ್‌ಮೆಂಟ್ ವಾಸಿಗಳು ಜಟಾಪಟಿಗಿಳಿದು ಕೊನೆಗೆ ಪೊಲೀಸ್ ಠಾಣೆ ಮೇಟ್ಟಿಲೇರಿದ ಘಟನೆ ಹೆಬ್ಬಾಳದ ಗಂಗಾನಗರದ ಕಂಫರ್ಟ್ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ.
ಹೌದು. ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಕಸ ಸುರಿದ ಪರಿಣಾಮ ಇಲಿಗಳು ಬಂದಿವೆ. ಅಷ್ಟೇ ಅಲ್ಲದೆ ನನ್ನ ಕಾರಿನ ವೈರ್‌ಗಳನ್ನು ಕಚ್ಚಿ ಹಾಕಿವೆ ಎಂದು ಕಾರ್ ಮಾಲೀಕ ಲಕ್ಷ್ಮೀ ನಾರಾಯಣ್ ಎಂಬುವರು ರಂಪಾಟ ಮಾಡಿದ್ದಾನೆ. ಅಷ್ಟೇ ಅಲ್ಲದೆ ಲಕ್ಷ ಲಕ್ಷ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
ಪರಿಹಾರ ಕೊಡಲು ನಿರಾಕರಿಸಿದ ಅಪಾರ್ಟ್‌ಮೆಂಟ್ ಅಸೋಸಿಯೇಶನ್ ಅಧ್ಯಕ್ಷರಿಗೆ ಲಕ್ಷ್ಮೀ ನಾರಾಯಣ್ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತ ಅಪಾರ್ಟ್‌ಮೆಂಟ್ ವಾಸಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
23/06/2022 01:03 pm