ಬಿಜೆಪಿ ಮುಖಂಡ ಅನಂತರಾಜು ಪತ್ನಿ ಸುಮಾ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಅನಂತರಾಜು ಸಾವಿನ ಕಾರಣ ಬಿಚ್ಚಿಟ್ಟಿದ್ದಾರೆ. ಅನಂತರಾಜುನ ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದೆ. ಅವ್ರು ಬೇರೆ ಮಹಿಳೆ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಗೊತ್ತಾದಾಗ ಕೋಪದಲ್ಲಿ ಮಾತನಾಡಿರೋದು ನಿಜ. ಆದ್ರೆ ಯಾವ ಹೆಂಡತಿಯೂ ಪತಿ ಸಾವನ್ನ ಬಯಸಲ್ಲ ಎಂದಿದ್ದಾರೆ.
ರೇಖಾ ನನ್ನ ಗಂಡನಿಗೆ ಕಿರುಕುಳ ಕೊಟ್ಟಿದ್ದಕ್ಕೆ ಅವ್ರು ಕೋರ್ಟ್ ನಿಂದ ಸ್ಟೇ ಪಡೆದಿದ್ರು. ಆಕೆ ಟಾರ್ಚರ್ ನಿಂದ ಅವ್ರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ದಿನ ನಾವು ಲಾಂಗ್ ಡ್ರೈವ್ ಹೋಗಿ ಬಂದಿದ್ವಿ. ಅವ್ರು ರೆಸ್ಟ್ ಗೆ ಅಂತ ಮೇಲಿನ ರೂಂ ಗೆ ಹೋಗಿದ್ರು. ನಾನು ಅವರನ್ನು ಹೋಂ ಅರೆಸ್ಟ್ ಮಾಡಿರಲಿಲ್ಲ. ನಾವೆಲ್ಲ ಚೆನ್ನಾಗಿ ಇದ್ವಿ ಎಂದು ಸುಮಾ ಅನಂತ ಸಾವಿನ ಕುರಿತು ಮಾತನಾಡಿದ್ದಾರೆ.
PublicNext
03/06/2022 07:34 pm