ಹಣ ಮನುಷ್ಯನ ಕೈಲಿ ಎಂಥಹ ಕೆಲಸವನ್ನ ಬೇಕಾದ್ರೂ ಮಾಡಿಸುತ್ತದೆ. ಆದ್ರೆ ಹಣಕ್ಕಾ ಏನ್ ಕೆಲಸ ಮಾಡಬೇಕು ಅನ್ನೋದು ತುಂಬ ಮುಖ್ಯವಾಗುತ್ತದೆ. ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಸಂಸಾರವನ್ನೇ ಹಾಳು ಮಾಡುತ್ತದೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಉದಾಹರಣೆ.
ಕಳೆದ ವಾರ ಬೊಮ್ಮನಹಳ್ಳಿ ಕೆರೆ ಬಳಿ ಮಹಿಳೆ ಕೊಲೆ ಪ್ರಕರಣ ಬೆನ್ನತ್ತಿದ ಬೊಮ್ಮನಹಳ್ಳಿ ಪೊಲೀಸರು ಕೊಲೆ ಪ್ರಕರಣವನ್ನ ಭೇದಿಸಿದ್ದಾರೆ. ಜೀವನಕ್ಕಾಗಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಹಸೀನಾ ಕೊಲೆಗೂ ಮೂರು ದಿನ ಮುನ್ನ ವಾಸೀಮ್ ಅನ್ನೋನನ್ನ ಪರಿಚಯ ಮಾಡಿಕೊಂಡಿದ್ಳು. ಆಟೋ ಡ್ರೈವರ್ ಆಗಿದ್ದ ವಾಸೀಮ್ ಹಸಿನಾಳನ್ನ ಪಿಕ್ ಮಾಡಿಕೊಂಡು ಬೊಮ್ಮನಹಳ್ಳಿ ಕೆರೆ ಹತ್ರ ಬಂದಿದ್ದ. ಕೆರೆ ಬಳಿ ಸ್ವಲ್ಪ ಸಮಯ ಏಕಾಂತದಲ್ಲಿ ಕಾಲ ಕಳೆದು ನಂತ್ರ ಹಸೀನಾಳ ಬಳಿ ಹಣಕ್ಕೆ ವಾಸೀಮ್ ಡಿಮ್ಯಾಂಡ್ ಮಾಡಿದ್ದ. ಇದಕ್ಕೆ ಹಸೀನಾ ಒಪ್ಪದಿದ್ದಾಗ ತಲೆ ಮೇಲೆ ಕಲ್ಲು ಹಾಕಿ ಆಕೆಯನ್ನ ಕೊಲೆ ಮಾಡಿ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೂರೂವರೆ ಸಾವಿರ ಹಣದೊಂದಿಗೆ ಪರಾರಿಯಾಗಿದ್ದ.
ಇದು ಕ್ರೈಂ ಸೀನ್ ಆದ್ರೆ ಅದರ ಮುಂದಿನದ್ದು ಕಣ್ಣೀರ ಕತೆ. ಕೊಲೆಯಾದ ಹಸೀನಾ ಎರಡು ಮಕ್ಕಳ ಅನಾಥರನ್ನಾಗಿದ್ದಾರೆ. ಇನ್ನು ವಾಸೀಮ್ ನಾಲ್ಕು ಮಕ್ಕಳನ್ನ ಬಿಟ್ಟು ಜೈಲು ಸೇರಿದ್ದಾನೆ. ಇನ್ನು ವಾಸೀಮ್ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು ಆರೋಪಿಯನ್ನ ಹಿಡಿಯಲು ಹೋದಾಗ ಮನೆಯಲ್ಲಿ ರೇಷನ್ ಕೂಡ ಇರಲಿಲ್ಲ. ಇದನ್ನ ಕಂಡ ಬೊಮ್ಮನಹಳ್ಲಿ ಪೊಲೀಸರು ಮಕ್ಕಳು ಹಸಿವು ನೋಡಲಾರದೆ ಮನೆಗೆ ಒಂದಷ್ಟು ರೇಷನ್ ಕೊಡಿಸಿ ಸಹಾಯ ಮಾಡಿದ್ದಾರೆ.
ಅದೇನೇ ಇದ್ರು ಕ್ರೈಂ ನಡೆಸಿ ಜೈಲು ಸೇರುವ ಮುನ್ನ ಮನೆಯವರ ಬಗ್ಗೆ ಯೋಚನೆ ಮಾಡಿದ್ರೆ ಒಳಿತು.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಬೆಂಗಳೂರು
PublicNext
18/08/2022 05:51 pm