ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 650 ಕೆ.ಜಿ.ರಕ್ತಚಂದನವನ್ನು ನೀಲಿಗಿರಿ ತೋಪಿನಲ್ಲಿ ಮುಚ್ಚಿಡಲಾಗಿತ್ತು.
ಹೊಸಕೋಟೆ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಸಿ ಕೆಜಿಗಟ್ಟಲೆ ರಕ್ತಚಂದನ ವಶಕ್ಕೆ ಪಡೆಯಲಾಗಿದೆ. ನೆರೆಯ ಆಂಧ್ರದ ನಲ್ಲಮಲ್ಲ ಅರಣ್ಯ ಪ್ರದೇಶದಿಂದ ರಕ್ತ ಚಂದನ ತರಲಾಗಿದೆ. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಖದೀಮರು ಎಸ್ಕೆಪ್ ಆಗಿದ್ದಾರೆ.
ರಕ್ತಚಂದನ ಬಚ್ಚಿಟ್ಟಿದ್ದ ಅಯಾಜ್ ಖಾನ್ , ಜಮೀರ್ ಮತ್ತು ಇರ್ಪಾನ್ ಎಸ್ಕೆಪ್ ಆಗಿದ್ದಾರೆ. ಈ ಮೂರು ಜನರ ವಿರುದ್ಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಕಟ್ಟಿಗೆನಹಳ್ಳಿ ರಕ್ತಚಂದನ ಸಾಗಾಣೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ನೆರೆಯ ರಾಜ್ಯಗಳಿಂದ ರಕ್ತಚಂದನ ತಂದು ಇಲ್ಲಿ ಹೆಚ್ಚಿನ ದಂದೆ ನಡೆಸುತ್ತಾರೆ. ಈಗ 650 ಕೆ.ಜಿ.ಗೂ ಅಧಿಕ ರಕ್ತ ಚಂದನ ದೊರೆತಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
PublicNext
17/06/2022 01:28 pm