ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾಲ್ಯವಿವಾಹಕ್ಕೆ ಕಾರಣರಾದ ವಯಸ್ಕ ಮತ್ತು ಪೋಷಕರಿಗೆ ಜೈಲೇ ಗತಿ

ಬೆಂಗಳೂರು: 14ವರ್ಷದ ಬಾಲಕಿಯನ್ನು 46ವರ್ಷದ ಗುರುಪ್ರಸಾದ್ ಎಂಬ ವಯಸ್ಕ ಮದುವೆಯಾಗಿ ಯಲಹಂಕ ಉಪನಗರ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ. ಬಾಲ್ಯ ವಿವಾಹಕ್ಕೆ ಕಾರಣರಾದ ಉತ್ತರ ಕರ್ನಾಟಕ ಮೂಲದ ತಂದೆ-ತಾಯಿ ಸಹ ಆರೋಪಿಯೊಂದಿಗೆ ಜೈಲುಪಾಲಾಗಿದ್ದಾರೆ.

ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿ ಚಿಕ್ಕಬೆಟ್ಟಹಳ್ಳಿಲಿ ಕೂಲಿಕೆಲಸ ಮಾಡಿಕೊಂಡು ಬಾಲಕಿಯ ಪೋಷಕರು ವಾಸವಿದ್ದರು. ಇವರಿಗೆ ರಾಜೇಶ್ವರಿ ಎಂಬ ಮದ್ಯವರ್ತಿ ಪರಿಚಯವಾಗಿ ಸೆಪ್ಟೆಂಬರ್‌ 7ರಂದು ಯಲಹಂಕ ಸಮೀಪದ ವಡೇರಹಳ್ಳಿ ಶಿವನಮಂದಿರದಲ್ಲಿ ಬಾಲಕಿಗೆ ಹಾಗೂ ವಯಸ್ಕ ಗುರುಪ್ರಸಾದ್ ಜೊತೆ ವಿವಾಹ ಮಾಡಿಸಲಾಯ್ತು. ಈಗಾಗಲೇ ಮದುವೆಯಾಗಿದ್ದ ವಯಸ್ಕ ಗುರುಪ್ರಸಾದ್ ಜೆಸಿಬಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ. ಗುರುಪ್ರಸಾದ್ ಮೊದಲ ಹೆಂಡತಿ ಮಗನ ಜೊತೆ ಈತನನ್ನು ಬಿಟ್ಟು ತವರು ಸೇರಿಕೊಂಡಿದ್ದಳು.

ಈಗ್ಗೆ ಹಲವು ವರ್ಷಗಳಿಂದ ಮತ್ತೊಂದು ಮದುವೆಗೆ ಯತ್ನಿಸುತ್ತಿದ್ದ. ಪೋಷಕರ ಒತ್ತಾಯದ ಮೇರೆಗೆ ಇಷ್ಟವಿಲ್ಲದ ಮದುವೆ ಆಗಿತ್ತು. ಹೇಗೊ ಬಾಲಕಿ ತನ್ನ ದೊಡ್ಡಮನಿಗೆ ವಿಷಯ ತಿಳಿಸಿ, ಉಪನಗರ ಪೊಲೀಸರಿಗೆ ದೂರು ನೀಡಿದ್ದರು. ಬಾಲ್ಯವಿವಾಹದ ಹಿನ್ನಲೆ ಯಲಹಂಕ ಉಪನಗರ ಪೊಲೀಸರು ದೂರು ದಾಖಲಿಸಿ, ಗುರುಪ್ರಸಾದ್ ಜೊತೆ ಬಾಲಕಿಯ ಪೋಷಕರನ್ನು‌ ಜೈಲಿಗಟ್ಟಿದ್ದಾರೆ. ಬಾಲಕಿ ರಿಮ್ಯಾಂಡ್ ಹೋಮ್‌ನಲ್ಲಿ ಆಶ್ರಯ ಪಡೆದಿದ್ದಾಳೆ.

Edited By :
PublicNext

PublicNext

10/09/2022 02:12 pm

Cinque Terre

32.04 K

Cinque Terre

2

ಸಂಬಂಧಿತ ಸುದ್ದಿ