ಬೆಂಗಳೂರು: ಬೆಂಗಳೂರಿನಂತಹ ಮಹಾನಗರದಲ್ಲಿ ಇತ್ತಿಚೇಗೆ ಕ್ರೈಂ ರೇಟ್ ಹೆಚ್ಚಾಗಿದೆ. ಅದರಲ್ಲೂ ಮೊಬೈಲ್ ರಾಬರಿ, ಲಾಂಗು ಮಚ್ಚು ತೋರಿಸಿ ಹಣ ಸುಲಿಗೆ ಮಾಡೋ ಕೇಸ್‌ಗಳಂತೂ ವಿಪರೀತವಾಗಿತ್ತು. ಆದರೆ ಕಳೆದೊಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರದಲ್ಲಿ ರಾಬರ್ಸ್ ಕೂಡ ಫುಲ್ ಸೈಲೆಂಟ್ ಆಗಿದ್ದಾರೆ.
ಕಳೆದ ಒಂದು ವಾರದಲ್ಲಿ ನಗರದಲ್ಲಿ ರಾಬರಿ ಕೇಸ್ ಗಳೇ ರಿಪೋರ್ಟ್ ಆಗಿಲ್ಲ. ಪ್ರತಿನಿತ್ಯ ಡಿವಿಷನ್‌ಗೆ ಎರಡು ಮೂರು ರಾಬರಿ ಕೇಸ್ ಗಳು ರಿಚಿಸ್ಟರ್ ಆಗ್ತಿತ್ತು. ಆದ್ರೆ ವಾರದಿಂದ ಕಂಟ್ರೋಲ್ ರೂಂಗೂ ರಾಬರಿ ಆಯ್ತೂ ಅಂತ ಮಾಹಿತಿ ಕೂಡ ಬಂದಿಲ್ಲ. ನಗರದ 8 ಡಿವಿಷನ್‌ಗಳಲ್ಲಿ ಪ್ರತಿನಿತ್ಯ 15-20 ರಾಬರಿ ಕೇಸ್ ವರದಿ ಆಗ್ತಾ ಇತ್ತು, ಅದ್ರಲ್ಲೂ ರಾತ್ರಿ 10ರ ಬಳಿಕವೇ ಒಂಟಿಯಾಗಿ ಬರೋರನ್ನು ಟಾರ್ಗೆಟ್ ಮಾಡಿ ರಾಬರಿ ಮಾಡ್ತಿದ್ರು. ಅದ್ರಲ್ಲೂ ಪ್ರಮುಖವಾಗಿ ಐಟಿ ಬಿಟಿ ಕಂಪನಿ ಹೆಚ್ಚಾಗಿರೋ ಏರಿಯಾಗಳಲ್ಲೇ ರಾಬರಿ ಕೇಸ್‌ಗಳು ಹೆಚ್ಚಾಗಿ ದಾಖಲಾಗ್ತಿತ್ತು.
ಮಹದೇವಪುರ, ವೈಟ್ ಫೀಲ್ಡ್, ಮಾರತ್ ಹಳ್ಳಿ, ಬೆಳ್ಳಂದೂರು ವರ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ರಾಬರಿ ಕೇಸ್ ಹೆಚ್ಚಾಗಿದ್ವು. ಇತ್ತೀಚೆಗೆ ಈ ಬಗ್ಗೆ ಪೊಲೀಸರಿಗೆ ಸಾಕಷ್ಟು ದೂರುಗಳು ಕೂಡ ಬರ್ತಾ ಇತ್ತು. ಮಾಸ್ಟರ್ ಕಂಟ್ರೋಲ್‌ಗೆ ಪ್ರತಿನಿತ್ಯ ದೂರುಗಳು ಬರ್ತಾ ಇತ್ತು. ಇದ್ರಿಂದ ರಾತ್ರಿ ವೇಳೆ ಪೊಲೀಸ್ ಹೊಯ್ಸಳ ಗಸ್ತನ್ನು ಹೆಚ್ಚಳ ಮಾಡಲಾಗಿತ್ತು.
ಆದ್ರೆ ಕಳೆದ ಒಂದು ವಾರದಿಂದ ಸುರಿಯುತ್ತಾ ಇರೋ ಮಳೆಯಿಂದ ರಾಬರ್ಸ್ ಕೂಡ ಸೈಲೆಂಟ್ ಆಗಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.ಮಳೆ ಹಿನ್ನಲೆ ಬಹುತೇಕ ಪ್ರದೇಶಗಳಲ್ಲಿ ರಾತ್ರಿವೇಳೆಯೂ ಪೊಲೀಸ್ರು ಬೀಡು ಬಿಟ್ಟಿದ್ದು, ಪೊಲೀಸರ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಬಿಬಿಎಂಪಿ ಸಿಬ್ಬಂದಿ ಸಹ ರಸ್ತೆಯಲ್ಲೇ ಇದ್ರು. ಮಳೆ ಹಿನ್ನಲೆ ಜನರು ಸಹ ಯಾರೂ ಹೊರಗಡೆ ಓಡಾಟ ಮಾಡ್ತಾವೂ ಇರಲಿಲ್ಲ. ಇದರಿಂದ ಬೆಂಗಳೂರಲ್ಲಿ ರಾಬರಿ ಗ್ಯಾಂಗ್ ಫುಲ್ ಸೈಲೆಂಟ್ ಆಗಿದೆ. ಒಟ್ಟಿನಿಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ರು ಈ ಕಳ್ಳಕಾಕರ ಕಾಟ ತಪ್ಪಿದೆ ಅನ್ನೋದೆ ಖುಷಿ ವಿಚಾರ.
PublicNext
09/09/2022 08:11 pm