ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಲಿತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಕು'ತಂತ್ರ; ಚಾಂಪಿಯನ್ ಎಜ್ಯುಕೇಶನ್ ನಿಂದ ದಬ್ಬಾಳಿಕೆ ಆರೋಪ

ಆನೇಕಲ್: ಪರಿಶಿಷ್ಟ ಜಾತಿಗೆ ಸೇರಿದ ಜಮೀನನ್ನು ಚಾಂಪಿಯನ್ ಎಜ್ಯುಕೇಶನ್ ಟ್ರಸ್ಟ್ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ.

ಹಾಗಾಗಿ ನಮಗೆ ನ್ಯಾಯ ಬೇಕು ಅಂತ ಪರಿಶಿಷ್ಟ ಜಾತಿ ಕುಟುಂಬಗಳು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಆನೇಕಲ್ ಸಮೀಪದ ನರೇಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೆಗ್ಗೊಂಡನಹಳ್ಳಿ ಸರ್ವೇ ನಂಬರ್ 77/ 8 ರಲ್ಲಿ ಮುನಿ ವೆಂಕಟಪ್ಪ ಎಂಬವರಿಗೆ ನಾಲ್ಕು 4 ಎಕರೆ 39 ಗುಂಟೆ ಜಾಗವನ್ನು 1977ರಲ್ಲಿ ಮಂಜೂರು ಮಾಡಲಾಗಿತ್ತು. ಮಕ್ಕಳಾದ ರಾಜಪ್ಪ, ಯಲ್ಲಪ್ಪ ಮತ್ತು ಚಂದ್ರಪ್ಪ ಅವರಿಗೆ ಭಾಗಪಟ್ಟಿ ಸಹ ಮಾಡಲಾಗಿತ್ತು. ಆದ್ರೆ , ಸರ್ವೇ ನಂಬರ್ 77/8ರಲ್ಲಿ ಅಮಯಮ್ಮ ಮತ್ತು ಚೆನ್ನಮ್ಮ ರಾಮಪ್ಪ ಎಂಬವರನ್ನು ನಕಲಿ ದಾಖಲೆ ಸೃಷ್ಟಿ ಮಾಡಿ 2 ಎಕರೆ 13 ಗುಂಟೆ ಜಾಗವನ್ನು ಚಾಂಪಿಯನ್ ಎಜುಕೇಶನ್ ಟ್ರಸ್ಟ್ ಮಾರಾಟ ಮಾಡಿದ್ದಾರೆ.

ಇನ್ನು ರಾಜಪ್ಪನ ಪತ್ನಿಯಾದ ವರಲಕ್ಷ್ಮಿ ಅವರ ಮಕ್ಕಳಾದ ಎಚ್ ಆರ್ ಮಧು, ನಾಗರಾಜು ಮಂಜುನಾಥ್ ಮುರಳಿ ಎಂಬವರಿಗೆ ಈ ಜಾಗ ಸೇರಿದ್ದು ನಮ್ಮ ಜಮೀನನ್ನು ರಾಜಾರೋಷವಾಗಿ ಕಿತ್ತು ಕೊಳ್ಳುತ್ತಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ರಾಜಪ್ಪನ ಬಳಿ ಅಶ್ವಥ್ ನಾರಾಯಣ್ ರೆಡ್ಡಿ ಮತ್ತು ಗೋವಿಂದರಾಜು ಎಂಬವರು ಅಕ್ರಮವಾಗಿ ಬರೆದುಕೊಂಡಿದ್ದಾರೆ. ಹಾಗಾಗಿ ನಮಗೆ ನ್ಯಾಯ ಕೊಡಿಸಬೇಕು ಅಂತ ಕುಟುಂಬಸ್ಥ ರಮೇಶ್ ತಿಳಿಸಿದರು.

ಇನ್ನು ಈ ಬಗ್ಗೆ ಚಾಂಪಿಯನ್ ಎಜುಕೇಶನ್ ಟ್ರಸ್ಟ್ ನ ವಕೀಲ ಕಿರಣ್ ಮಾತನಾಡಿ, ಸರ್ವೆ ನಂಬರ್ 77/8 ರಲ್ಲಿ ಚೆನ್ನಮ್ಮನ ಕಡೆಯಿಂದ 1 ಎಕರೆ ಜಾಗ ಚಂದ್ರಪ್ಪನ ಕಡೆಯಿಂದ 13 ಗುಂಟೆ ಜಾಗವನ್ನು ಹಣ ಕೊಟ್ಟು ಬಳಿಕ ಖರೀದಿ ಮಾಡಿದ್ದೇವೆ, ದಾಖಲಾತಿ ಸಹ ಇದೆ. ಇಂಜೆಕ್ಷನ್ ಆರ್ಡರ್ ಇದ್ರೂ ಸಹ ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.

- ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Manjunath H D
Kshetra Samachara

Kshetra Samachara

03/09/2022 07:55 am

Cinque Terre

5.84 K

Cinque Terre

0

ಸಂಬಂಧಿತ ಸುದ್ದಿ