ಬೆಂಗಳೂರು: ನಗರದ ಬಾಪೂಜಿ ನಗರದಲ್ಲಿ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ಆರು ವರ್ಷಗಳ ಹಿಂದೆ ಚಂದ್ರು ಎಂಬಾತನನ್ನು ವಿವಾಹವಾಗಿದ್ದ ಶಿಲ್ಪಾ ವಾಸವಿದ್ದ ಮನೆಯಲ್ಲೇ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ಶಿಲ್ಪಳ ಮನೆಯರು ಗಂಡನ ಮನೆಯವರು ಕೊಲೆ ಮಾಡಿದ್ದಾರೆಂದು ಆರೋಪಿಸಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು. ಇತ್ತೀಚೆಗೆ ಹಣದ ವಿಚಾರವಾಗಿ ಆಗಾಗ ಗಲಾಟೆ ಮಾಡಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ನಂತೆ. ಈ ಬಗ್ಗೆ ಶಿಲ್ಪಾ ಅನೇಕ ಬಾರಿ ನನ್ನ ಅಕ್ಕನ ಬಳಿ ಅಳಲು ತೋಡಿಕೊಂಡಿದ್ದಳೆಂದು ಶಿಲ್ಪಾ ಸಹೋದರಿ ಆರೋಪಿಸಿದ್ದಾರೆ. ಸದ್ಯ ಪ್ರಕರಣ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
01/09/2022 10:32 pm