ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಸ್ಕಾಂ ಅಳವಡಿಸಿದ್ದ ಬ್ಯಾಟರಿ‌ ಬಿಡದ‌ ಖದೀಮರು; ಚಾಲಾಕಿ ಕಳ್ಳರ ಅರೆಸ್ಟ್‌!

#ಮಲ್ಲೇಶ್ವರಂ: ಇಷ್ಟು ದಿನಗಳ ಕಾಲ ಟ್ರಾಫಿಕ್‌ ಸಿಗ್ನಲ್‌ಗಳ ಬ್ಯಾಟರಿ ಕದಿಯುತ್ತಿದ್ದ ಆರೋಪಿಗಳು ಇದೀಗ ವರಸೆ ಬದಲಿಸಿದ್ದಾರೆ. ಬೆಸ್ಕಾಂ ಅಳವಡಿಸಿದ್ದ ಯುಪಿಎಸ್ ಬ್ಯಾಟರಿ‌ಗಳನ್ನು ರಾತ್ರೋ ರಾತ್ರಿ ಕಳ್ಳತನ ಮಾಡುತ್ತಿದ್ದ ನಾಲ್ಕು ಮಂದಿ ಚಾಲಾಕಿ ಖದೀಮರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬೆಸ್ಕಾಂ ಸಹಾಯಕ ಅಭಿಯಂತರ ಮಂಜುನಾಥ್ ನೀಡಿದ ದೂರಿನ‌ ಮೇರೆಗೆ ಕಟ್ಟಿಗೇನಹಳ್ಳಿ ನಿವಾಸಿಗಳಾದ ಚಿನ್ನಿದೊರೈ, ರಮೇಶ್, ವೇಣುಗೋಪಾಲ್ ಹಾಗೂ ವಸಂತ್ ಬಂಧಿತ ಆರೋಪಿಗಳಾಗಿದ್ದು 5 ಲಕ್ಷ ಮೌಲ್ಯದ 100 ಬ್ಯಾಟರಿ ಹಾಗೂ ಎರಡು ಲಗೇಜ್ ಆಟೊ ಸೇರಿದಂತೆ ನಾಲ್ಕು ಆಟೊ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಪರಾರಿಯಾಗಿದ್ದಾರೆ.

ಬಂಧಿತ ಪ್ರಮುಖ ಆರೋಪಿ ಚಿನ್ನಿದೊರೈ ಈ ಹಿಂದೆ ಲಗೇಜ್ ಆಟೋದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ. ಜೊತೆಗೆ ಗುಜರಿ ಅಂಗಡಿ ತೆರೆದಿದ್ದ. ಬಂಧಿತ ಆರೋಪಿಗಳೆಲ್ಲರೂ ಸಂಬಂಧಿಕರಾಗಿದ್ದು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಲು ವಾಮಮಾರ್ಗ ಹಿಡಿದ ಚಿನ್ನಿದೊರೈ ರಸ್ತೆ ಬದಿಗಳಲ್ಲಿ ಟ್ಯಾನ್ಸ್ ಫಾರ್ಮರ್‌ಗಳ ಕಾರ್ಯದೊತ್ತಡ ತಗ್ಗಿಸುವ ಬ್ಯಾಟರಿಗಳನ್ನು ಕಳ್ಳತನ ಮಾಡಿ ಸಾವಿರಾರು ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದರು.

ಹಣದಾಸೆಗಾಗಿ ಸುಮಾರು 10 ಕೆ.ಜಿಯಿರುವ ಬ್ಯಾಟರಿಗಳನ್ನೇ ಕಳ್ಳತನದ ಕಾಯಕ ಮಾಡಿಕೊಂಡಿದ್ದ ಚಿನ್ನಿದೊರೈ ಸಂಬಂಧಿಕರಿಗೆ ಹಣದಾಸೆ ತೋರಿಸಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ. ಮಧ್ಯರಾತ್ರಿ ಆಟೋದಲ್ಲಿ ತೆರಳಿ ಮಲ್ಲೇಶ್ವರ, ವೈಯಾಲಿಕಾವಲ್, ಗಿರಿನಗರ, ಸದಾಶಿವನಗರ ಸೇರಿದಂತೆ ನಗರದ 11 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು.‌

ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಸತತ 15 ದಿನಗಳಿಂದ ಕಾರ್ಯಾಚರಣೆ ಆರೋಪಿಗಳನ್ನ ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

Edited By : Abhishek Kamoji
PublicNext

PublicNext

22/08/2022 06:00 pm

Cinque Terre

21.61 K

Cinque Terre

0

ಸಂಬಂಧಿತ ಸುದ್ದಿ