ಬೆಂಗಳೂರು: ಆಫೀಸರ್ ರೀತಿ ಬಟ್ಟೆ ಹಾಕೊಂಡು ಈತ ಸರ್ಕಾರಿ ಕಚೇರಿಗೆ ಎಂಟ್ರಿ ಕೊಟ್ಟ ಅಂದ್ರೆ ಮುಗೀತು. ಅಲ್ಲಿ ಸಾಲು ಸಾಲು ಸರ್ಕಾರಿ ಉದ್ಯೋಗಿಗಳು ಈತನ ನಯವಾದ ಮಾತಿನಿಂದ ಮೋಸ ಹೋಗ್ತಿದ್ರು. ತಾನು ಬಿಬಿಎಂಪಿ ಚೀಫ್ ಎಂಜಿನಿಯರ್ ಅಂದ್ಕೊಂಡೇ ಸಾಕಷ್ಟು ಜನರಿಗೆ ವಂಚಿಸಿದ್ದಾನೆ. ಅದ್ರಲ್ಲೂ ಹುಡುಗಿಯರೇ ಇವನ ಮೈನ್ ಟಾರ್ಗೆಟ್.
ಟಿಪ್ ಟಾಪ್ ಆಗಿ ಕಾಣಿಸ್ತಿರೋ ಇವ್ನ ಹೆಸ್ರು ಪರಮೇಶ. ಮೊನ್ನೆ ಏಕಾಏಕಿ ಸಿಎಂ ಕಚೇರಿ ಕೃಷ್ಣಾಗೆ ಹೋಗಿ ಬಂದೋಬಸ್ತ್ ಗೆ ನೇಮಿಸಿದ್ದ ಪೊಲೀಸರ ಬಳಿ ಹೋಗಿ ನಿಂತಿದ್ದ. ಅಲ್ಲಿ ಸಿಎಂ ಆಪ್ತ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಕರೆದಿದ್ದಾರೆ. ಸಿಎಂರನ್ನ ಭೇಟಿಯಾಗ್ಬೇಕಾಗಿದೆ. ತನ್ನನ್ನ ಸಿಎಂ ಸಾಹೇಬ್ರು ಪರ್ಸನಲ್ ಸೆಕ್ರೆಟರಿ ಆಗಿ ನೇಮಿಸ್ಕೊಳ್ಬೇಕು ಅಂತಿದ್ದಾರೆ. ನಾನೀಗ ಪ್ರೆಸೆಂಟ್ ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಅಂತ ಫೇಕ್ ಐಡಿ ಫ್ರೂಫ್ ನ ತೋರಿಸಿದ್ದಾನೆ. ಐಡಿಯನ್ನ ನೋಡ್ತಿದ್ದಂತೆ ಫೇಕ್ ಅನ್ನೋದನ್ನ ಖಚಿತಪಡಿಸಿಕೊಂಡ ಪೊಲೀಸ್ರು ಪರಮೇಶ್ ನನ್ನ ಹೈಗ್ರೌಂಡ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಯನ್ನ ಕೈಗೊಂಡಿದ್ದರು.
ವಂಚಕ ಪರಮೇಶ್ ನನ್ನ ವಿಚಾರಣೆಗೊಳಪಡಿಸಿದ ವೇಳೆ ಫೇಕ್ ಬಿಬಿಎಂಪಿ ಚೀಫ್ ಎಂಜಿನಿಯರ್ ಅನ್ನೋದು ಖಚಿತವಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಆರೋಪಿಯ ಮೊಬೈಲನ್ನ ಪರಿಶೀಲಿಸಿದ ವೇಳೆ ಹಲವು ಯುವತಿಯರ, ಮಹಿಳೆಯರ ಜೊತೆ ಚಾಟ್ ಮಾಡಿರೋದು ಬೆಳಕಿಗೆ ಬಂದಿದೆ. ಅದರಲ್ಲೂ ದೊಡ್ಡ ದೊಡ್ಡ ಪೋಸ್ಟ್ ನಲ್ಲಿರೋ ಸರ್ಕಾರಿ ಮಹಿಳಾ ಅಧಿಕಾರಿಗಳನ್ನ ಬುಟ್ಟಿಗೆ ಹಾಕಿಕೊಳ್ಳೋ ಕೆಲಸವನ್ನ ಇದೇ ಪರಮೇಶ್ ಮಾಡಿರೋ ಬಗ್ಗೆ ಪೊಲೀಸ್ರಿಗೆ ಮಾಹಿತಿ ಸಿಕ್ಕಿತ್ತು. ಬೇರೆ ಕಡೆ ಪೋಸ್ಟಿಂಗ್ ಕೊಡಿಸ್ತೀನಿ, ಟೆಂಡರ್ ಕೊಡಿಸ್ತೀನಿ ಅಂತ ಹೇಳಿ ಸಾಕಷ್ಟು ಜನರಿಗೆ ವಂಚಿಸಿದ್ನಂತೆ ಇದೇ ಪರಮೇಶ್.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
21/08/2022 12:12 pm