ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಕಳೆದ ಜುಲೈ 15ರಂದು ಮನೆಯಲ್ಲಿದ್ದ ಅಂಚನಾ ತುಳಸಿಯಾನ(52) ಎಂಬ ಮಹಿಳೆಯ ಕತ್ತುಕೊಯ್ದು ಕೊಲೆ ಮಾಡಲಾಗಿತ್ತು. ಈ ಸಂಬಂಧ ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಬಿಹಾರದ ಪಶುಪತಿ @ ಪಪಿಯಾ & ಧೀರಜ್ ಕುಮಾರ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಮೂವರು ಆರೋಪಿಗಳು ಕೆಲಸ ಮಾಡುತ್ತಿದ್ದ ಅಂಗಡಿ ಮನೆ ಮಾಲೀಕರ ಮನೆಯಲ್ಲೇ 13ಲಕ್ಷ ನಗದು, 1ಲಕ್ಷ ಬೆಲೆಯ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದರು. ಈ ವೇಳೆ ಯಾವುದೇ ಕ್ಲೂ ಸಿಗದಂತೆ ಸಿಸಿಟಿವಿ ಡಿವಿಆರ್ ನ್ನು, ಹಂತಕರು ತೆಗೆದುಕೊಂಡು ಹೋಗಿದ್ದರು.ಕೊಲೆ ಮಾಡಿ ಬಿಹಾರಕ್ಕೆ ಎಸ್ಕೇಪ್ ಆಗಿದ್ದ ಮೂವರಲ್ಲಿ ಇಬ್ಬರ ಬಂಧನವಾಗಿದೆ.
14 ಲಕ್ಷದಲ್ಲಿ 11 ಲಕ್ಷ ಹಣ ದಸ್ತಗಿರಿಯಾಗಿದೆ. ಪ್ರಮುಖ ಆರೋಪಿಗಳ ಬಂಧನವಾಗಿದ್ದು, ಮತ್ತೋರ್ವನಿಗಾಗಿ ದೇವನಹಳ್ಳಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ..
PublicNext
10/08/2022 02:06 pm