ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೇಕ್ ಆರ್ಡರ್ ಮಾಡಿ ಪ್ರವೀಣ್ ನೆಟ್ಟಾರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸ್ರು!

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತ ಸುಳ್ಯ ಪೊಲೀಸ್ರು ಮೂವರು ಶಂಕಿತರನ್ನ ಬೆಂಗಳೂರಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನ ವಶಕ್ಕೆ ಪಡೆಯೋ ಸಿಸಿಟಿವಿಯಲ್ಲೂ ಸೆರೆಯಾಗಿದೆ.

ಇನ್ನೂ ಬೇಕರಿಯಲ್ಲಿ ಕೆಲಸ ಮಾಡ್ತಿದ್ದ ಆರೋಪಿಗಳ ಬೆನ್ನು ಹತ್ತಿದ ಪೊಲೀಸರು, ಆರೋಪಿಗಳನ್ನ ಖೆಡ್ಡಾಗೆ ಕೆಡವಲು ಮಾಸ್ಟರ್ ಪ್ಲಾನ್ ಮಾಡಿದ್ರು.ಕೇಕ್ ಆರ್ಡರ್ ಮಾಡಿಸಿ ಹಂತಕನಿಗಾಗಿ ಗಂಟೆಗಟ್ಟಲೆ ಕಾದು ಕೊನೆಗೆ ಹೆಡೆಮುರಿ ಕಟ್ಟಿದ್ದಾರೆ.ಆರೋಪಿ ಕೇಕ್ ತರೋದನ್ನೇ ಕಾಯುತ್ತಾ ಕುಳಿತಿದ್ದು ಕೇಕ್ ತರುತ್ತಾ ಇದ್ದಂತೆ ಪೊಲೀಸರು ಲಾಕ್ ಮಾಡಿದ್ದಾರೆ.

ಪಿಜಿಯಲ್ಲಿ ಗ್ರಾಹಕರ ಸೋಗಿನಲ್ಲಿ ತಂಗಿದ್ದ ಪೊಲೀಸ್ರು ಮೂರು ಮೂರು ಬಾರಿ ಕೇಕ್ ಬುಕ್ಕಿಂಗ್ ಮಾಡಿದ್ರು. ಆದ್ರೆ ಆರೋಪಿ ಬದಲಿಗೆ ಬೇರೆಯವನು ಆರ್ಡರ್ ತಂದಾಗ ಮರಳಿ ಆರೋಪಿ ಬರುವ ತನಕ ಕೇಕ್ ಆರ್ಡರ್ ಮಾಡಿದ್ರು.ಕೊನೆಗೆ ಆತ ಬರುವ ತನಕ ಕಾಯ್ದು ಕೊನೆಗೆ ಲಾಕ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೌಪಾಲ್, ರಜಾಕ್, ಅಲ್ತಾಫ್ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

Edited By : Manjunath H D
PublicNext

PublicNext

02/08/2022 08:40 pm

Cinque Terre

37.23 K

Cinque Terre

7

ಸಂಬಂಧಿತ ಸುದ್ದಿ