ಬೆಂಗಳೂರು: ಶಂಕಿತ ಉಗ್ರ ಅಕ್ತರ್ ಹುಸೈನ್ ಸಂಪರ್ಕದಲ್ಲಿದ್ದ ಜುಭಾನನ್ನ ನಿನ್ನೆ ತಮಿಳುನಾಡಿನ ಸೇಲಂ ನಲ್ಲಿ ಬಂಧಿಸಿದ್ದ ಸಿಸಿಬಿ ಇಂದು ಕೋರ್ಟ್ ಗೆ ಹಾಜರುಪಡಿಸಿದ್ರು.
ಎನ್ ಐ ಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಜುಭಾನನ್ನ ಹಾಜರುಪಡಿಸಿದ ಸಿಸಿಬಿ ವಿಚಾರಣೆ ಹತ್ತು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ರು.
ಸಿಸಿಬಿ ಮನವಿ ಪುರಸ್ಕರಿಸಿ ಶಂಕಿತ ಜುಭಾ ನನ್ನ ಹತ್ತು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. 25 ಜನ್ರ ಗ್ರೂಪ್ ನಲ್ಲಿ ಈತನು ಕೂಡ ಸದಸ್ಯನಾಗಿದ್ದ. ಇಸ್ಲಾಮಿಕ್ ರಾಷ್ಟ್ರದ ಬಗ್ಗೆ ಒಲವು ಹೊಂದಿದ್ದು ಇವರ ಮೊಬೈಲ್ ಗಳನ್ನ ರಿಟ್ರೀವ್ ಮಾಡಬೇಕಿದೆ.ಜೊತೆಗೆ ಗ್ರೂಪ್ ನ ಇತರ ಸದಸ್ಯರು, ಇವರ ಕಾರ್ಯ ಚಟುವಟಿಕೆಗಳನ್ನ ಪತ್ತೆ ಮಾಡಬೇಕಿದೆ ಎಂದು ಕೋರ್ಟ್ ಗೆ ಸಿಸಿಬಿ ಮನವಿ ಸಲ್ಲಿಸಿತ್ತು.
PublicNext
26/07/2022 07:37 pm