ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾದ ಪಿಎಸ್‌ಐ ಬುಡಕ್ಕೆ ಕೈ ಹಾಕಿದ ಸಿಐಡಿ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ‌ ಕೇಸ್‌ನಲ್ಲಿ ಸಿಐಡಿ ಬುಡಕ್ಕೆ ಕೈ ಹಾಕಿದೆ. ಮಧ್ಯವರ್ತಿಗಳಂತೆ ಅಭ್ಯರ್ಥಿಗಳ ಸಂಪರ್ಕದಲ್ಲಿದ್ದ ಕೆಲ ಪಿಎಸ್ಐಗಳ ಬೆನ್ನಿಗೆ ಬಿದ್ದ ತಂಡ, 545 ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಹಳೇ ಪರೀಕ್ಷೆಗಳ ಜಾಡು ಬೆನ್ನತ್ತಲು ಸಿದ್ಧತೆ ನಡೆಸಿದೆ.

ಈಗಾಗ್ಲೇ ಬಂಧನವಾಗಿರೋ 2018-2019ರ ಬ್ಯಾಚ್‌ನ ಇಬ್ಬರು ಪಿಎಸ್‌ಐ ಗಳು ಹಾಗೂ ತಲೆ‌ಮರೆಸಿಕೊಂಡಿರುವ ಪಿಎಸ್‌ಐಗಳನ್ನು ಸೇರಿ

2016ರ ಬ್ಯಾಚ್‌ನಿಂದ ಬಂದ ಕೆಲವರ ಮೇಲೆ ಸಿಐಡಿಗೆ ಅನುಮಾನ ಶುರುವಾಗಿದೆ. ಹೀಗಾಗಿ ಬಂಧಿತರ ಮೂಲಕ ಹಳೆ ಪರೀಕ್ಷೆ ದಾಖಲೆಗಳ ತಲಾಶ್‌ಗೆ ಸಿಐಡಿ ಮುಂದಾಗಿದೆ‌. ಹಿಂದೆ ನೇಮಕವಾಗಿದ್ದ ಬಂಧಿತ ಪಿಎಸ್‌ಐಗಳೂ ಕೂಡಾ ಅಕ್ರಮವಾಗಿ ಬಂದಿರುವ ಅನುಮಾನ ಮೂಡಿದ್ದು, ಅಂದು ಅಕ್ರಮದ‌ ಮಾರ್ಗದಿಂದ ಇಲಾಖೆ ಸೇರಿ, ಈಗ ಅಭ್ಯರ್ಥಿಗಳಿಗೆ ಮಧ್ಯವರ್ತಿಗಳಂತೆ ಕೆಲಸ ಮಾಡಿರೋ ಶಂಕೆ ವ್ಯಕ್ತವಾಗಿದೆ‌.

ಬಂಧಿತ ಪಿಎಸ್‌ಐ ಗಳ‌ ಮೂಲಕ ಅಂದು ಸಂಪರ್ಕದಲ್ಲಿದ್ದವರ ಪತ್ತೆಗೆ ತಯಾರಿ ನಡೆಸಲಾಗಿದೆ. ಬಂಧಿತರ ಹಾಗೂ ನಾಪತ್ತೆಯಾದ ಕೆಲ ಪಿಎಸ್ ಐಗಳ ಪರೀಕ್ಷಾ ದಾಖಲಾತಿಗಳ ತಲಾಶ್ ಗೆ ಸಿದ್ದತೆ‌ನಡೆಸಲಾಗಿದೆ‌. ಹಳೇ ದಾಖಲೆಗಳನ್ನ ರೀ ಓಪನ್ ಮಾಡಿ ಬಿಸಿ ಮುಟ್ಟಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

2016 ನವೆಂಬರ್ ಬ್ಯಾಚ್- 418 ಪೋಸ್ಟ್

ಜೂನ್ 2017 ಬ್ಯಾಚ್- 184 ಪೋಸ್ಟ್

2018- 2019 ಬ್ಯಾಚ್ - 194 ಪೋಸ್ಟ್

2020 ಜನವರಿ-200 ಪೋಸ್ಟ್

2020 ಮಾರ್ಚ್-300 ಪೋಸ್ಟ್

2021 ಅಕ್ಟೋಬರ್- 545 ಪೋಸ್ಟ್ ಮೂಲ ಕೆದಕಲು ತಯಾರಿ ನಡೆಸಿದೆ‌.

ಆರೋಪಿತರ ಟ್ರ್ಯಾಕ್ ರೆಕಾರ್ಡ್, ಸಂಪರ್ಕಿತ ವ್ಯಕ್ತಿಗಳು, ಸ್ಟೇಷನ್ ಸರ್ವಿಸ್ ರೆಕಾರ್ಡ್ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

15/07/2022 09:03 am

Cinque Terre

2.07 K

Cinque Terre

0

ಸಂಬಂಧಿತ ಸುದ್ದಿ