ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೆಲಮಂಗಲ: ನಶೆಯಲ್ಲಿದ್ದ ಕಾರು ಚಾಲಕನಿಂದ ಬೈಕ್‌ಗೆ ಡಿಕ್ಕಿ ಬೈಕ್ ಸವಾರ ಸಾವು

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾನಮತ್ತನಾಗಿ ಕಾರು ಚಲಾಯಿಸಿಕೊಂಡು ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಆಸ್ಪತ್ರೆಯಲ್ಲಿ ಕೊನೆ ಉಸಿರೆಳದ ಘಟನೆ ನೆಡೆದಿದೆ

ರಾಷ್ಟ್ರೀಯ ಹೆದ್ದಾರಿ 48 ತುಮಕೂರು ರಸ್ತೆಯ ನೆಲಮಂಗಲ ತಾಲ್ಲೂಕಿನ ಹಳೇನಿಜಗಲ್ ಬಳಿ ನಡೆದ ಭೀಕರ ಅಪಘಾತದಲ್ಲಿ ಬಿಹಾರ ಮೂಲದ ಮಹಮ್ಮದ್ ಗಫರ್ (45) ಮೃತ ಬೈಕ್ ಸವಾರನಾಗಿದ್ದು, ಸಮೀಪದಲ್ಲೇ ಪಂಚರ್ ಶಾಪ್ ನಡೆಸಿಕೊಂಡು ಜೀವನ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ತುಮಕೂರಿನ ಶಿವಪ್ರಕಾಶ್ ಎಂಬುರಿಗೆ ಸೇರಿದ ಐ20 ಕಾರಿಂದ ಈ ಅಪಘಾತ ಸಂಭವಿಸಿದ್ದು, ಅಪಘಾತದ ಬಳಿಕ ಮಾನವೀಯತೆ ತೋರದೆ ಕಾರಿನಲ್ಲಿದ್ದವರು ಸ್ಥಳದಲ್ಲೇ ಕಾರು ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ. ಅಲ್ಲದೆ ಅಪಘಾತಗೊಂಡ ಕಾರಿನಲ್ಲಿ ಮದ್ಯದ ಬಾಟಲಿ ಜೊತೆಗೆ ಕಾರಿನಲ್ಲಿ ಲೋಕಾಯುಕ್ತ ವಿಶೇಷ ಅಭಿಯೋಜಕರ ಗುರುತಿನ ಕಾರ್ಡ್ ಕೂಡ ಪತ್ತೆಯಾಗಿದ್ದು, ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರ 100 ಮೀಟರ್ ಹಾರಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ, ಕೂಡಲೇ ಸ್ಥಳೀಯರು ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರೂ ಗಂಭೀರಗಾಯಗೊಂಡ ಬೈಕ್ ಸವಾರ ಗಫರ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಘಟನೆ ಸಂಬಂಧ ಕಾರು ಚಾಲಕ ಮತ್ತು ಕಾರಿನಲ್ಲಿದ್ದವರು ಮದ್ಯದ ಅಮಲಿನಲ್ಲಿದ್ದದ್ದೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದ್ದು, ಡ್ರಿಂಕ್ ಆಂಡ್ ಡ್ರೈವ್ ಪ್ರಕರಣ ದಾಖಲಿಸಿಕೊಂಡಿರೋ ನೆಲಮಂಗಲ ಸಂಚಾರಿ ಠಾಣಾ ಪೊಲೀಸ್ರು ಸದ್ಯ ಕಾರಿನಲ್ಲಿದ್ದವರ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಒಟ್ಟಾರೆ ಹುಟ್ಟೂರು ಬಿಟ್ಟು ಜೀವನ ಹರಸಿ ಬಂದ ಈ ನತದೃಷ್ಟ, ತನ್ನದ್ದಲ್ಲದ ತಪ್ಪಿಗೆ ಈ ಅಪಘಾತದಿಂದ ಇಹಲೋಕ ತ್ಯಜಿಸಿದ್ದು, ದುರಂತವೇ ಸರಿ.

Edited By :
PublicNext

PublicNext

12/07/2022 05:49 pm

Cinque Terre

35.88 K

Cinque Terre

1

ಸಂಬಂಧಿತ ಸುದ್ದಿ