ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಚೇರ್ಮನ್ ಪೊಲೀಸರ 112 ಕಾರ್ಯ ವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಕಂಟ್ರೋಲ್ ರೂಂ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಚೇರ್ಮನ್ ಶರತ್‌ಚಂದ್ರ ಪ್ರಶ್ನೆ ಮಾಡಿದ್ದಾರೆ.
ಶರತ್ ಚಂದ್ರ ಮಗಳು ಸರಗಳ್ಳತನ ಕುರಿತು 112ಗೆ ಮಾಹಿತಿ ನೀಡಿದ್ರು. 11 ಗಂಟೆಗೆ ಮಾಹಿತಿ ನೀಡಿದ್ರೆ 12 ಗಂಟೆಗಳವರೆಗೂ ಮಾಹಿತಿ ಪಡೆಯುತ್ತಲೇ ಇದ್ದ ಕಂಟ್ರೋಲ್ ರೂಂ ಸಿಬ್ಬಂದಿ ಕಾರ್ಯಕ್ಕೆ ಶರತ್ ಚಂದ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಒಬ್ಬ ನಾಗರಿಕನಾಗಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡೋದೆ ತಪ್ಪು ಅನಿಸಿಬಿಟ್ಟಿದೆ ಅಂತ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಗೆ ಕರೆ ಮಾಡಿದ್ರೆ ಯಾರೂ ಕರೆ ರಿಸೀವ್ ಮಾಡಿರಲಿಲ್ಲ. ನಂತರ 15 ನಿಮಿಷದ ಬಳಿಕ ಹೆಬ್ಬಾಳ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಇದು ನಮ್ಮ ಲಿಮಿಟ್ಸ್‌ಗೆ ಬರಲ್ಲ ಅಮೃತಹಳ್ಳಿ ಪೊಲೀಸ್ ಠಾಣೆಗೆ ಬರುತ್ತೆ ಎಂದು ಫೋನಿಟ್ಟಿದ್ರು.ಇದಾದ ನಂತರ ಎರಡೂ ಠಾಣೆಗಳಿಂದ ನಿರಂತರವಾಗಿ ಕರೆಗಳು ಬರುತ್ತಲೇ ಇತ್ತು ಹೀಗಾಗಿ ಮಾಹಿತಿ ಕೊಟ್ಟ ತಪ್ಪಿಗೆ ರಾತ್ರಿಯಿಡೀ ಎಚ್ಚರ ಇರಬೇಕಾ? ಎಂದು ಶರತ್ ಚಂದ್ರ ಪ್ರಶ್ನೆ ಮಾಡಿದ್ದಾರೆ.
ನಿಮ್ಮ ಕಂಟ್ರೋಲ್ ರೂಂನಲ್ಲಿರುವ ಗುತ್ತಿಗೆ ನೌಕರರಿಗೆ ಹೆಬ್ಬಾಳ ಎಲ್ಲಿದೆ ಎಂದೇ ಗೊತ್ತಿಲ್ಲ ಪೊಲೀಸರೇ ಇಲ್ಲದೆ ಕಂಟ್ರೋಲ್ ರೂಂನ್ನ ಕಂಟ್ರೋಲ್ ಮಾಡುತ್ತಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Kshetra Samachara
11/07/2022 01:16 pm