ಬೆಂಗಳೂರು:ತಡರಾತ್ರಿಯವರೆಗೆ ಪಾರ್ಟಿ ಮಾಡುತ್ತಿದ್ದ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.ಸಿಸಿಬಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ದಾಳಿ ನಡೆದಿದ್ದು,ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಬ್ ಹೌಸ್ ಹೆಸರಿನ ಪಬ್ ನಲ್ಲಿ ಪಾರ್ಟಿ ಮಾಡಲಾಗುತ್ತಿತ್ತು.
ಪಾರ್ಟಿಯಲ್ಲಿ ವಿದೇಶಿ ಯುವಕ ಯುವತಿಯರು ಭಾಗಿಯಾಗಿದ್ದರು.ದಾಳಿ ವೇಳೆ 60 ಕ್ಕೂ ಹೆಚ್ಚು ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ45 ಯುವಕರು, 19 ಯುವತಿಯರು ಒಳಗೊಂಡಿದ್ದಾರೆ. ಇನ್ನೂ ಇದು ರೆವ್ ಪಾರ್ಟಿ ಎಂಬ ಅನುಮಾನ ಮೂಡಿದ್ದು, ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/07/2022 08:20 pm