ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸಪ್ಪನಿಗೆ 4 ವರ್ಷ ಜೈಲು ಶಿಕ್ಷೆ 1 ಕೋಟಿ ರೂ.ದಂಡ ವಿಧಿಸಿದ ಸಿಟಿ ಸಿವಿಲ್ ಕೋರ್ಟ್!

ಬೆಂಗಳೂರು: ಎಸ್ಪಿಯಾಗಿ ಕಾರ್ಯನಿರ್ವಹಿಸುವಾಗ ಅಕ್ರಮ ಆಸ್ತಿ ಗಳಿಕೆ ಸಾಬೀತು ಹಿನ್ನೆಲೆ ಶ್ರೀನಿವಾಸ್ ಐಯ್ಯರ್ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಕೋಟಿ ರೂಪಾಯಿ ದಂಡ ವಿಧಿಸಿ 77ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.

ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯ ಎಸ್ಪಿಯಾಗಿ ಶ್ರೀನಿವಾಸ್ 2007ರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ತಮ್ಮ ಆದಾಯ ಮೂಲಗಳಿಗಿಂತ ಶೇ.53ರಷ್ಟು ಆಸ್ತಿ ಸಂಪಾದನೆ ಮಾಡಿರುವುದು ದಾಳಿ ವೇಳೆ ಕಂಡು ಬಂದಿತ್ತು.

ಈ ಸಂಬಂಧ ಅಂದಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಿ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿದ 77ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ವಿ.ಶ್ರೀಕಾಂತ್ ಆರೋಪಿತ ಎಸ್ಪಿಗೆ ನಾಲ್ಕು ವರ್ಷ ಸಾದಾ ಸಜೆ ಹಾಗೂ 1 ಕೋಟಿ ರೂ.ದಂಡ ವಿಧಿಸಿದ್ದಾರೆ. ದಂಡ ಪಾವತಿಸುವಲ್ಲಿ ವಿಫಲರಾದರೆ ಹೆಚ್ಚುವರಿಯಾಗಿ 2 ವರ್ಷ ಸಾದಾ ಸಜೆ ಅನುಭವಿಸಬೇಕೆಂದು ತೀರ್ಪು ನೀಡಿದ್ದಾರೆ.

Edited By :
Kshetra Samachara

Kshetra Samachara

01/07/2022 09:06 pm

Cinque Terre

2.05 K

Cinque Terre

0

ಸಂಬಂಧಿತ ಸುದ್ದಿ