ಬೆಂಗಳೂರು: ಕಳ್ಳರು ಒಂದೋ ಹಣ, ಚಿನ್ನಾಭರಣ ಹೆಚ್ಚಾಗಿ ಕದೀತಾರೆ. ಬೈಕು- ಕಾರು ಇತ್ಯಾದಿ ಲಪಟಾಯಿಸ್ತಾರೆ. ಆದ್ರೆ, ಈ ಖದೀಮರು ಡಿಫರೆಂಟ್. ಒಂದು ರೀತಿಯ ವಿಚಿತ್ರ ಕಳ್ಳರು ಇವರೆನ್ನಬಹುದು. ಇವ್ರು ಕದಿಯೋದು ಮನೆ ಮುಂದೆ ಹಾಗೂ ಅಂಗಡಿಗಳ ಮುಂದೆ ಇಟ್ಟಿರುವ ಹೂ ಕುಂಡಗಳನ್ನು ಮಾತ್ರ!
ಅಚ್ಚರಿಯಾಯಿತೇ!? ಹೌದು... ರಾತ್ರಿ ವೇಳೆ ಬರೀ ಪಾಟ್ ಗಳನ್ನೇ ಟಾರ್ಗೆಟ್ ಮಾಡಿ ಕಳವಿಗೆ ಇಳಿಯುತ್ತಾರೆ. ಕೆಆರ್ ಪುರಂ ಬಳಿ ಇರುವ ಲೋಚನಾ ಐ ಕೇರ್ ಸೆಂಟರ್ ಮುಂದೆ ಇಟ್ಟಿರುವ ಪಾಟ್ ಗಳನ್ನು ಕದ್ದೊಯ್ಯಲಾಗಿದೆ. ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ವರು ಬಂದು, ಸಿಸಿ ಟಿವಿಯಿಂದ ತಪ್ಪಿಸಿಕೊಳ್ಳಲು ತಮ್ಮ ಟೀಶರ್ಟ್ ಗಳಿಂದ ಮುಖ ಮುಚ್ಚಿಕೊಂಡು ಪಾಟ್ ಕದಿಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು, ಈ ಪ್ರಕರಣದ ಬಗ್ಗೆ ದೂರು ದಾಖಲಾದರೂ ಕೂಡ ಗಂಭೀರತೆ ಪಡೆದುಕೊಳ್ಳೋದಿಲ್ಲ. ಹೀಗಾಗಿ ಇದನ್ನೇ ಚಟವಾಗಿಸಿಕೊಂಡಿದ್ದಾರೆ ಈ ಹೂ ಕುಂಡ ಖದೀಮರು. ಈ ಪಾಟ್ ಗೆ ಹೆಚ್ಚು ಕಮ್ಮಿ 300- 400 ರೂ. ಬೆಲೆ ಇದೆ. ಆದರೂ ರಾತ್ರಿಯೆಲ್ಲ ನಿದ್ದೆ ಬಿಟ್ಟು, ರಿಸ್ಕ್ ತಕೊಂಡು ಪಾಟ್ ಗಳನ್ನೇ ಕದೀತಾರೆ ಅಂದ್ರೆ ಸೋಜಿಗವೇ ಅಲ್ವೇ?
PublicNext
01/07/2022 02:54 pm