ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಪಾಸಣೆ ನೆಪದಲ್ಲಿ ಹಣ ವಸೂಲಿ ಆರೋಪ ಟ್ರಾಫಿಕ್ ಎಎಸ್ ಐ ಮತ್ತು ಪಿಸಿ ಸಸ್ಪೆಂಡ್

ಬೆಂಗಳೂರು: ತಪಾಸಣೆ ನೆಪದಲ್ಲಿ ಹೊರ ರಾಜ್ಯದ ಚಾಲಕರಿಂದ ದಂಡದ ಸೋಗಿನಲ್ಲಿ ರಶೀದಿ ನೀಡದೆ ಅಕ್ರಮವಾಗಿ ಹಣ ವಸೂಲಿ ಮಾಡಿದ ಆರೋಪದಡಿ ಹಲಸೂರು ಗೇಟ್ ಸಂಚಾರಿ ಠಾಣೆಯ ಎಎಸ್ ಐ ಹಾಗೂ ಹೆಡ್ ಕಾನ್ಸ್ ಸ್ಟೇಬಲ್ ಅಮಾನತುಗೊಳಿಸಿ ಟ್ರಾಫಿಕ್ ಕಮೀಷನರ್ ಡಾ.ಬಿ.ಆರ್.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ಇದೇ ತಿಂಗಳು 10ರಂದು ದೇವಾಂಗ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಮಹೇಶ್ ಹಾಗೂ ಹೆಡ್ ಕಾನ್ಸ್ ಟೇಬಲ್ ಗಂಗಾಧರಪ್ಪ ಅವರು ಕೇರಳ ಮೂಲದ ಸಂತೋಷ್ ಕುಮಾರ್ ಎಂಬಾತನ ಕಾರ್ ತಡೆದು ನಿಲ್ಲಿಸಿದ್ದರು. ಕಾರಿನಲ್ಲಿ ವಾಶ್ ಬೇಸಿನ್ ಇದ್ದ ಕಾರಣ 2500 ಅಕ್ರಮವಾಗಿ ಸಂತೋಷ್ ರಿಂದ ವಸೂಲಿ ಮಾಡಿದ್ದರು. ಹಣ ಪಡೆದುಕೊಂಡಿದಕ್ಕೆ ರಶೀದಿ ಸಹ ನೀಡಿರಲಿಲ್ಲ.

ಈ ಸಂಬಂಧ ಇಮೇಲ್ ಮೂಲಕ ನಗರ ಸಂಚಾರಿ ಪೊಲೀಸರಿಗೆ ಸಂತೋಷ್ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯದ ವೇಳೆ ಪೊಲೀಸರು ಬಾಡಿ ವೋರ್ನ್ ಕ್ಯಾಮೆರಾ ಧರಿಸದಿರುವುದು ಕಂಡುಬಂದಿತ್ತು. ಮೆಲ್ನೋಟಕ್ಕೆ ಸಿಬ್ಬಂದಿ ನಿರ್ಲಕ್ಷ್ಯತೆ ಹಾಗೂ ದುರ್ನಡತೆ ಆರೋಪದಡಿ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಲಾಗಿದೆ ಎಂದು ರವಿಕಾಂತೇಗೌಡ ಆದೇಶದಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

27/06/2022 05:52 pm

Cinque Terre

25.51 K

Cinque Terre

0

ಸಂಬಂಧಿತ ಸುದ್ದಿ