ಬೆಂಗಳೂರು: ಮಕ್ಕಳ ಮೈಮೇಲೆ ರಾಶಿ ರಾಶಿ ಚಿನ್ನಾಭರಣ ಹಾಕೋ ಮುನ್ನ ಯೋಚಿಸಬೇಕು, ಎಚ್ಚರ ವಹಿಸಬೇಕು. ಅದೂ ಮದ್ವೆ, ರಿಸೆಪ್ಶನ್ ಗೆ ಬರೋ ಮಕ್ಕಳನ್ನೇ ಟಾರ್ಗೆಟ್ ಮಾಡ್ತಿದ್ದ ಐನಾತಿ ಕಳ್ಳನನ್ನು ಸುದ್ದಗುಂಟೆಪಾಳ್ಯ ಪೊಲೀಸ್ರು ಬಂಧಿಸಿದ್ದಾರೆ.
ಮಕ್ಕಳನ್ನು ನೈಸಾಗಿ ಮಾತನಾಡಿಸಿ, ಬಳಿಕ ಅವರ ಮೈಮೇಲಿರೋ ಚಿನ್ನಾಭರಣ ಎಗರಿಸ್ತಿದ್ದ ಬಾಬು @ ಪಲ್ಸರ್ ಬಾಬು @ ಚೌಟ್ರಿ ಬಾಬುನನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಬಾಬು ತನ್ನ ಸಹಚರನ ಜೊತೆ ಡೀಸೆಂಟಾಗಿ ಮದ್ವೆ ಮನೆಗೆ ಎಂಟ್ರಿ ಕೊಟ್ಟು ಅಕ್ಕಪಕ್ಕದಲ್ಲಿ ಮಕ್ಕಳು ಓಡಾಡ್ತಿದ್ರೆ, ಆ ಮಕ್ಕಳಿಗೆ ಚಾಕೋಲೆಟ್ ಕೊಡ್ತಾನೆ. ಎಷ್ಟು ಮುದ್ದಾಗಿದ್ಯಾ ಅಂತ ಪುಸಲಾಯಿಸಿ ಮಕ್ಕಳನ್ನು ಸಂಬಂಧಿಯಂತೆ ಮುದ್ದಿಸಿ ಮೈಮೇಲಿನ ಚಿನ್ನವನ್ನು ಉಪಾಯವಾಗಿ ಎಗರಿಸುತ್ತಿದ್ದ.
ಕಳ್ಳ ಬಾಬುನ ಹಿಂದೆ ನಗರದ ಕೆಲ ಪೊಲೀಸ್ರು ಕೂಡ ಬಿದ್ದಿದ್ರು. ಸದ್ಯ ಸುದ್ದಗುಂಟೆ ಪೊಲೀಸ್ರ ಕೈಗೆ ಲಾಕ್ ಆಗಿದ್ದು, ಬಂಧಿತನಿಂದ 500 ಗ್ರಾಂ ಚಿನ್ನಾಭರಣ ಸೀಜ್ ಮಾಡಲಾಗಿದೆ. ಬಾಬು ಈ ಹಿಂದೆ ಅರಮನೆ ಮೈದಾನ, ಗೋವಿಂದರಾಜ ನಗರ, ಸದಾಶಿವ ನಗರ, ಮಾಗಡಿ ರಸ್ತೆ ಭಾಗದ ಚೌಟ್ರಿಯಲ್ಲಿ ಕೈಚಳಕ ತೋರಿದ್ದ.
PublicNext
25/06/2022 03:44 pm