ಬೆಂಗಳೂರು : ನೈಸ್ ರೋಡ್ ಬರ್ತಾ ಬರ್ತಾ ಪುಂಡ ಹುಡುಗರ ಅಡ್ಡವಾಗಿ ಮಾರ್ಪಟ್ಟಿದೆ ಯಾಕೆಂದರೆ ಪುಂಡ ಹುಡುಗರು ರಸ್ತೆಯ ಮೇಲೆ ಬೇಕಾಬಿಟ್ಟಿ ವೀಲಿಂಗ್ ಬೈಕ್ ರೇಸ್ ಮಾಡುತ್ತಿದ್ದಾರೆ.
ಇಂದು ಬೆಳಗ್ಗೆ ಕೂಡ ಮೈಸೂರು ರಸ್ತೆಯಿಂದ ಪಿಎಸ್ ಕಾಲೇಜ್ ಕಡೆ ಹೋಗುವ ನೈಸ್ ರಸ್ತೆಯಲ್ಲಿ ಹುಡುಗರು ಬೈಕ್ ರೇಸಿಂಗ್ ಮಾಡಿ ಇತರ ವಾಹನ ಸವಾರರಿಗೆ ತೊಂದರೆ ನೀಡಿದ್ದಾರೆ.
ನೈಸ್ ರಸ್ತೆ ಮೇಲೆ ಮೊದಲೇ ವಾಹನಗಳು ವೇಗದಿಂದ ಚಲಿಸುತ್ತಿರುತ್ತವೆ ಈ ಪುಂಡ ಹುಡುಗರು ರಸ್ತೆಯ ಮಧ್ಯದಲ್ಲಿ ನಿಂತುಕೊಂಡು ರಸ್ತೆಯ ಮೇಲೆ ಬರುವ ವಾಹನಗಳನ್ನು ನಿಲ್ಲಿಸಿ ಬೈಕ್ ರೇಸ್ ಮಾಡಿದ್ದಾರೆ.
ಇದೆಲ್ಲಾ ಕಣ್ಣಿಗೆ ಕಾಣುತ್ತಿದ್ದರೂ ಪೊಲೀಸರು ಮತ್ತು ನೈಸ್ ರೋಡ್ ಸಿಬ್ಬಂದಿ ಕಣ್ಣು ಮುಚ್ಚಿ ಕುಳಿತಿದ್ದಾರೆ ಎನ್ನುವ ಪ್ರಶ್ನೆ ಈಗ ಜನರಲ್ಲಿ ಕಾಡುತ್ತಿದೆ.
ಇನ್ನು ಈ ಪುಂಡ ಹುಡುಗರು ಹೆಲ್ಮೆಟ್ ಕೂಡ ಧರಿಸದೆ ಅತಿವೇಗದಲ್ಲಿ ಬೈಕ್ ಚಲಾಯಿಸಿ ರೇಸಿಂಗ್ ಮಾಡುತ್ತಿದ್ದಾರೆ. ಈ ಹುಡುಗರ ಕಾಟ ದಿಂದ ರಸ್ತೆಯಲ್ಲಿ ಚಲಿಸುವ ದ್ವಿಚಕ್ರ ವಾಹನ ಸವಾರರು ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಭಯದಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣಗೊಂಡಿದೆ.
ಕೂಡಲೇ ಪೊಲೀಸರು ಮತ್ತು ನೈಸ್ ರೋಡ್ ಸಿಬ್ಬಂದಿ ಎಚ್ಚೆತ್ತುಕೊಂಡು ನೈಸ್ ರೋಡ್ ಮೇಲೆ ಬೈಕ್ ರೇಸಿಂಗ್ ಮಾಡುತ್ತಿರುವ ಪುಂಡ ಯುವಕರಿಗೆ ಬ್ರೇಕ್ ಹಾಕಬೇಕು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
23/06/2022 03:49 pm