ಬೆಂಗಳೂರು: ಚೀನಿ ಆ್ಯಪ್ ಮೂಲಕ ಜನರಿಗೆ ವಂಚಿಸುತ್ತಿರುವುದನ್ನು ಪತ್ತೆ ಮಾಡಿದ ಬೆಂಗಳೂರು ದಕ್ಷಿಣ ವಿಭಾಗ ಸೆನ್ ಪೊಲೀಸರು ಆ್ಯಪ್ ಬ್ಲಾಕ್ ಮಾಡಿದ್ದಾರೆ.
ಲಾಕ್‌ಡೌನ್ ಸಂಧರ್ಭದಲ್ಲಿ ಎಂಟ್ರಿಕೊಟ್ಟಿದ್ದ ಚೀನಿ ಲೋನ್ ಆ್ಯಪ್‌ಗಳಿಂದ ಸಾಕಷ್ಟು ಜನ ತೊಂದರೆ ಅನುಭವಿಸಿದ್ದರು. ಸ್ಪಾಟ್ ಲೋನ್ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡಿದ್ದ ಆ್ಯಪ್ ಮೇಲೆ ಸಾಕಷ್ಟು ದೂರು ದಾಖಲಾಗಿದ್ದವು. ಈ ಹಿನ್ನೆಲೆ ಹ್ಯಾಂಡಿಲೋನ್, ಈಝಿ ಕ್ಯಾಶ್, ಸೂಪರ್ ಕ್ಯಾಶ್, ಕ್ಯಾಶ್ ನೌ ಆ್ಯಪ್‌ಗಳನ್ನ ಪೊಲೀಸರು ಬಂದ್ ಮಾಡಿಸಿದ್ದಾರೆ.
ಇನ್ನು ಈ ಆ್ಯಪ್‌ಗಳು ಕಾರ್ಯ ನಿರ್ವಹಿಸೋದು ಕೂಡ ವಂಚನೆ ಉದ್ದೇಶ ಎನ್ನುವುದು ಬೆಳಕಿಗೆ ಬಂದಿತ್ತು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಚೀನಿ ಆ್ಯಪ್‌ಗಳನ್ನ ಹಣದ ಅವಶ್ಯಕತೆ ಇದ್ದವರು ಡೌನ್‌ಲೋಡ್ ಮಾಡಿಕೊಳ್ಳುರೆ. ಡೌನ್ ಲೋಡ್ ಆದ ಕೂಡಲೇ ಆ್ಯಪ್ ಕಡೆಯಿಂದ ಕರೆ ಮಾಡಿ 3ರಿಂದ 7 ಸಾವಿರದವರೆಗೆ ಲೋನ್ ಕೊಡೋದಾಗಿ ಹೇಳಿದ ಬಳಿಕ ಎಲ್ಲಾ ಟರ್ಮ್ಸ್ ಆ್ಯಂಡ್ ಕಂಡಿಷನ್‌ಗೆ ಒಪ್ಪಿದ ಬಳಿಕ ನಡೆಯುತ್ತೆ ಫೋನ್ ಹ್ಯಾಕ್ ಆಗುತ್ತಿತ್ತು. ಮಾಲ್ವೆರ್ ಎಂಬ ವೈರಸ್ ಮೊಬೈಲ್‌ಗೆ ಹರಿಬಿಟ್ಟು ಲೋನ್ ತೆಗೆದುಕೊಂಡವರ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದರು. ಮೊದಲು ಮೂರು ಸಾವಿರ ಲೋನ್ ಅಪ್ಲೈ ಮಾಡಿದರೆ ಸಾಲ ಕೊಡುವ ಚೀನಿ ಆ್ಯಪ್ ಮೊದಲೇ ಒಂದೂವರೆ ಸಾವಿರ ಹಣವನ್ನ ಬಡ್ಡಿ ಎಂದು ಕಟ್ ಮಾಡಿ ಅಕೌಂಟ್‌ಗೆ ಹಾಕ್ತಾರೆ. ಅಂದರೆ ಗ್ರಾಹಕ ಹಣ ಕಟ್ಟಬೇಕಾದರೆ ಮೂರು ಸಾವಿರ ಹಣ ಪೂರ್ತಿಯಾಗಿ ಕಟ್ಟಬೇಕು. ನಂತರ ಏಳು ದಿನಗಳಲ್ಲಿ ಹಣವನ್ನ ಕಟ್ಟಬೇಕು. ಇಲ್ಲದಿದ್ದಲ್ಲಿ ಗ್ರಾಹಕನ ಮೊಬೈಲ್‌ನಲ್ಲಿರುವ ಎಲ್ಲಾ ನಂಬರ್‌ಗಳಿಗೆ ಅಶ್ಲೀಲವಾದ ಫೋಟೋಗಳು ಹೋಗುತ್ತವೆ.
ಪದೇ ಪದೇ ಮೆಸೆಜ್ ಮಾಡಿ ಟಾರ್ಚರ್ ಮಾಡ್ತಿದ್ದ ಆ್ಯಪ್‌ಗಳು ಮಾನಹಾನಿಗೂ ಮುಂದಾಗುತ್ತಿದ್ದವು. ಸಾಲ ತೆಗೆದುಕೊಂಡವನ ಪರಿಚಿತರಿಗೆಲ್ಲ ಕರೆ ಮಾಡಿ ಅಶ್ಲೀಲವಾಗಿ ನಿಂದಿಸುವ ಕೆಲಸಗಳು ನಡೆಯುತ್ತೆ. ಸದ್ಯ ಈ ರೀತಿಯ ಆ್ಯಪ್ ಗಳನ್ನ ಫ್ರೀಜ್ ಮಾಡಿರುವ ದಕ್ಷಿಣ ವಿಭಾಗದ ಪೊಲೀಸರು ಈ ಆ್ಯಪ್‌ಗಳ ಮೇಲೆ ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ.
Kshetra Samachara
23/06/2022 01:54 pm