ಬೆಂಗಳೂರ: ಬಿಟಿಎಮ್ ಏರಿಯಾದ ನಿವಾಸಿಗಳು ರಾತ್ರಿ ಮನೆಯ ಮುಂದೆ ಗಾಡಿ ನಿಲ್ಲಿಸಿದ್ದರು ಆದರೆ ಬೆಳಗೆದ್ದು ಗಾಡಿಗಳನ್ನು ಆನ್ ಮಾಡಿದಾಗ ಏರಿಯಾದ ಜನರಿಗೆ ಶಾಕ್ ಕಾದಿತ್ತು. ಗಾಡಿ ಆನ್ ಮಾಡಬೇಕಾದರೆ ಗಾಡಿ ಆನ್ ಆಗುತ್ತಿರಲಿಲ್ಲ ಏನಾಗಿರಬಹುದು ಎಂದು ನೋಡಿದಾಗ ಗಾಡಿಗಳ ಬ್ಯಾಟರಿ ಮಾಯವಾಗಿತ್ತು. ಇಷ್ಟು ದಿನ ಮನೆ ಮುಂದೆ ನಿಲ್ಲಿಸಿದ್ದ ಗಾಡಿಗಳನ್ನು ಕದಿಯುತ್ತಿದ್ದ ಚೋರರು ಈಗ ಗಾಡಿ ಬಿಟ್ಟು ಬರೀ ಬ್ಯಾಟರಿ ಎತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಿಸಿಟಿವಿ ದೃಶ್ಯಗಳನ್ನು ನೋಡಿ ಒಬ್ಬನೇ ಒಬ್ಬ ಗಾಡಿಯಲ್ಲಿ ಬಂದು ನಿಮಿಷಗಳಲ್ಲೇ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳ ಬ್ಯಾಟರಿ ಕದ್ದು ಪರಾರಿಯಾಗಿದ್ದಾನೆ. ನಿನ್ನೆ ಒಂದೇ ರಾತ್ರಿ ಈತ ಮೂವತ್ತಕ್ಕೂ ಹೆಚ್ಚು ಗಾಡಿಗಳ ಬ್ಯಾಟರಿ ಕದ್ದು ಪರಾರಿಯಾಗಿದ್ದಾನೆ. ಬಿಟಿಎಂ ಲೇಔಟ್ ನ 2ನೇ ಹಂತದ ಜನರು ಬೆಳಗೆದ್ದು ನೋಡಿದಾಗ ಈ ಏರಿಯಾದ ಹಲವಾರು ರಸ್ತೆಗಳಲ್ಲಿ ನಿಲ್ಲಿಸಿದ್ದ ಗಾಡಿಗಳ ಬ್ಯಾಟರಿ ಕಾಣೆಯಾಗಿತ್ತು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಮೈಕೋಲೇಔಟ್ ಪೊಲೀಸರು ಏರಿಯಾದ ಸಿಸಿ ಕ್ಯಾಮೆರಾಗಳನ್ನು ಚೆಕ್ ಮಾಡಲು ಮುಂದಾದರು. ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಸೆರೆಯಾಗಿದ್ದು ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಬ್ಯಾಟರಿ ಕಳ್ಳನನ್ನು ಹುಡುಕಲು ಮುಂದಾಗಿದ್ದಾರೆ.
ನೀವು ಕೂಡ ಇನ್ನುಮೇಲೆ ನಿಮ್ಮ ಮನೆಯ ಮುಂದೆ ಗಾಡಿ ನಿಲ್ಲಿಸುವ ಮುನ್ನ ಹುಷಾರಾಗಿರಿ ಇಲ್ಲವೆಂದರೆ ನಿಮ್ಮ ಗಾಡಿಗಳ ಬ್ಯಾಟರಿ ಕೂಡ ಮಾಯವಾಗಬಹುದು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
22/06/2022 08:47 pm