ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಶಾಲೆಯ ಅನಧಿಕೃತ ಬ್ಯಾರಿಕೇಡ್-ಸವಾರರಿಗೆ ನಿತ್ಯವೂ ಪರದಾಟ!

ಬೆಂಗಳೂರು: ಖಾಸಗಿ ಶಾಲೆ ಒಂದು ತಮ್ಮ ಸ್ಕೂಲ್‌ಮುಂಭಾಗದ ಮುಖ್ಯರಸ್ತೆಯಲ್ಲಿ ಅನುಮತಿಯಿಲ್ಲದೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಇದರಿಂದ ಇಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯ ಹಲವಾರು ವಾಹನಗಳು ಸಂಚರಿಸುವಂತಹ ಈ ಮುಖ್ಯರಸ್ತೆಯಲ್ಲಿ ಶಾಲೆ ರಸ್ತೆ ಮೇಲೆ ಬ್ಯಾರಿಕೇಡ್ ಏನೋ ಅಳವಡಿಸಿದೆ.

ಆದರೆ ಶಾಲೆಯ ಬಳಿ ವಾಹನಗಳು ಬರುತ್ತಿದ್ದಂತೆಯೇ ಯಾವುದೇ ರೀತಿಯ ಸೈನ್ಬೋರ್ಡ್ ಇಲ್ಲದ ಕಾರಣ ರಸ್ತೆ ಮೇಲೆ ಬರುವಂತಹ ವಾಹನ ಸವಾರರು ರಸ್ತೆ ಮೇಲೆ ಇರುವ ಬ್ಯಾರಿಕೇಡ್ ಕಂಡು ಗಾಬರಿ ಕೊಳ್ಳುತ್ತಿದ್ದಾರೆ.

ಇದು ಬೇಗೂರು ಕೊಪ್ಪ ಮುಖ್ಯರಸ್ತೆ ಇದಾಗಿದ್ದು, ಇದೇ ರಸ್ತೆಯಿಂದ ಬೇರೆ ಊರಿನಿಂದ ಕೊಪ್ಪ ಆನೇಕಲ್ ಕಡೆ ಹೋಗುವ ವಾಹನಗಳು ಸಂಚರಿಸಬೇಕಾಗುತ್ತದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯ ಮೇಲೆ ಖಾಸಗಿ ಶಾಲೆ ಅಳವಡಿಸಿರುವ ಬ್ಯಾರಿಕೇಡ್ ಗಳನ್ನು ತೆರವು ಪಡಿಸಿ ಸುಲಭವಾಗಿ ವಾಹನ ಸಂಚಾರ ಆಗುವಂತೆ ಮಾಡಿಕೊಡಬೇಕು ಎಂದು ವಾಹನ ಸವಾರರು ಅಧಿಕಾರಿಗಳಿಗೆ ಕೇಳಿಕೊಳ್ಳುತ್ತಿದ್ದಾರೆ.

Edited By : Somashekar
Kshetra Samachara

Kshetra Samachara

09/06/2022 07:51 pm

Cinque Terre

3.75 K

Cinque Terre

0

ಸಂಬಂಧಿತ ಸುದ್ದಿ