ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಮಲ್‌ಹಾಸನ್ ನೋಡಲು ಅಭಿಮಾನಿಗಳ ನೂಕುನುಗ್ಗಲು: ನಿಯಂತ್ರಿಸಲು ಬಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ

ಬೆಂಗಳೂರು: ತಮಿಳು ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದ ನಟ ಕಮಲ್‌ಹಾಸನ್ ನೋಡಲು ಬಂದ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿತ್ತು. ಅಭಿಮಾನಿಗಳನ್ನ ನಿಯಂತ್ರಿಸಲು ಬಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ‌ ನಡೆಸಿರೋ ಘಟನೆ ನಗರದ ಮಂತ್ರಿ ಮಾಲ್ ನಲ್ಲಿ ನಡೆದಿದೆ‌.

ಚಿತ್ರವೊಂದರ ಪ್ರಮೋಷನ್ ಗಾಗಿ ನಿನ್ನೆ ಮಂತ್ರಿ ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕಾಗಿ ನಟ ಕಮಲ್ ಹಾಸನ್ ಆಗಮಿಸಿದ್ದರು‌.ನಟನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಜನಸಮೂಹ ಹೆಚ್ಚಾಗಿ ಗುಂಪುಗೂಡುತ್ತಿದ್ದಂತೆ ಮಾಲ್ ನ ಭದ್ರತಾ ಸಿಬ್ಬಂದಿ ನಿಯಂತ್ರಿಸಲು ಬಂದಾಗ ಹಲ್ಲೆ ಮಾಡಿದ್ದಾರೆ. ಅಲ್ಲದೇ ಮಹಿಳೆಯೊಬ್ಬರ ಮೇಲೆಯೂ ಹಲ್ಲೆ ನಡೆದಿದೆ ಎನ್ನಲಾಗಿದೆ.‌ ಹಲ್ಲೆ‌ ನಡೆದಿರುವ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ದೂರು ನೀಡಿದರೆ ಕ್ರಮ‌‌ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Edited By : Somashekar
Kshetra Samachara

Kshetra Samachara

03/06/2022 12:54 pm

Cinque Terre

5.75 K

Cinque Terre

0

ಸಂಬಂಧಿತ ಸುದ್ದಿ