ದೊಡ್ಡಬಳ್ಳಾಪುರ: ಅಂಗಡಿಯ ವೆಲ್ಡಿಂಗ್ ಕೆಲಸ ಮಾಡೋಕೆ ಬಂದವ ಆಂಟಿ ಜೊತೆ ಬಾಂಡಿಂಗ್ ಶುರು ಮಾಡಿದ್ದ! ಆತ 27ರ ಯುವಕ, ಆಕೆ 35ರ ಆಂಟಿ. ಕದ್ದು ಮುಚ್ಚಿ ಇಬ್ಬರೂ ಮನೆಯಲ್ಲೇ ಪಲ್ಲಂಗದಾಟ ಶುರು ಮಾಡಿದ್ರು. ರೂಮ್ ವೆಂಟಿಲೇಟರ್ ಮೂಲಕ ಕಳ್ಳ ಬೆಕ್ಕಿನಂತೆ ಬಂದು ಆಂಟಿ ಜೊತೆ ಸರಸವಾಡಿ ಹೋಗುತ್ತಿದ್ದ ಆತ, ಒಂದು ದಿನ ಆಂಟಿ ಕತ್ತು ಸೀಳಿ ಪರಾರಿಯಾದ!
ಮುಂಜಾನೆ 5ರ ಸಮಯ. ಗೃಹಪ್ರವೇಶಕ್ಕೆಂದು ಮನೆಯಿಂದ ಹೊರಟ ಗಂಡನನ್ನ ಬೀಳ್ಕೊಟ್ಟ ನಂತರ ಮೊಬೈಲ್ ಕರೆಯಲ್ಲಿ ತಲ್ಲೀನಳಾಗಿದ್ಳು. ಚಾಕು ಹಿಡಿದು ಬಂದ ಆತ, ಆಕೆಯ ಮೇಲೆ ಮನಸ್ಸೋ ಇಚ್ಛೆ ತಿವಿದು ಎಸ್ಕೇಪ್ ಆದ. ತಾಯಿಯ ಚೀರಾಟ ಕೇಳಿ ಮಲಗಿದ್ದ ಮಕ್ಕಳು ಹೊರಗೆ ಬಂದು ನೋಡುವಷ್ಟರಲ್ಲಿ ಆಕೆ ರಕ್ತದ ಮಡುವಲ್ಲೇ ಪ್ರಾಣ ಬಿಟ್ಟಿದ್ಳು.
ಮೇ 15ರ ಮುಂಜಾನೆ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದ ಭೀಕರ ಕೊಲೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಭಾಗ್ಯಶ್ರೀ ಮನೆ ಮುಂಭಾಗದಲ್ಲಿ ಹೆಣವಾಗಿದ್ಳು. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ದೊಡ್ಡಬೆಳವಂಗಲ ಪೊಲೀಸರಿಗೆ ಹಂತಕನ ಸುಳಿವು ಅದಾಗಲೇ ಸಿಕ್ಕಿತ್ತು. ಘಟನೆ ನಡೆದ 9ನೇ ದಿನಕ್ಕೆ ರಾಯಚೂರಿನಲ್ಲಿ ಬಂಧಿಸಿದ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಅಂದಹಾಗೆ, ಕೊಲೆಗಾರ ಇದೇ ಗ್ರಾಮದ ರಿಯಾಜ್ ನೇ ಆಗಿದ್ದ!
ಕೊಲೆಯಾದ ಭಾಗ್ಯಶ್ರೀ ಮತ್ತು ಆಕೆಯ ಗಂಡ ಚನ್ನಬಸವಯ್ಯ ಮನೆ ಮುಂದೆ ಅಂಗಡಿ ಹಾಕುವ ತೀರ್ಮಾನಕ್ಕೆ ಬಂದಿದ್ರು. ಊರಿನವನೇ ಆದ ವೆಲ್ಡರ್ ರಿಯಾಜ್ ನನ್ನ ವೆಲ್ಡಿಂಗ್ ಕೆಲಸಕ್ಕೆ ಕರೆಸಿದ್ದಾರೆ. ಕೆಲಸ ಮಾಡುವ ನೆಪದಲ್ಲಿ ಭಾಗ್ಯಶ್ರೀ ಮತ್ತು ರಿಯಾಜ್ ನಡುವೆ ನಂಟು ಬೆಸೆದಿದೆ.
ಇದೇ ನಂಟು ಇಬ್ಬರ ಅನೈತಿಕ ಸಂಬಂಧಕ್ಕೂ ದಾರಿ ಮಾಡಿ ಕೊಟ್ಟಿತ್ತು. ಗಂಡ- ಮಕ್ಕಳು ಬೇರೆ ಕಡೆ ಮಲಗಿದ್ದರೆ, ಭಾಗ್ಯಶ್ರೀ ರೂಮ್ ನಲ್ಲಿ ಒಬ್ಬಳೇ ಮಲಗುತ್ತಿದ್ದಳು. ರಾತ್ರಿಯಾಗುವುದನ್ನೇ ಕಾಯುತ್ತಿದ್ದ ರಿಯಾಜ್ ರೂಮ್ ವೆಂಟಿಲೇಟರ್ ಮೂಲಕ ಬಂದು ಭಾಗ್ಯಶ್ರೀ ಜೊತೆ ಪಲ್ಲಂಗದಾಟ ಆಡುತ್ತಿದ್ದ. 4 ವರ್ಷಗಳಿಂದ ಇಬ್ಬರ ಲವ್ವಿ ಡವ್ವಿ ನಡೆಯುತ್ತಲೇ ಇತ್ತು.
ಈ ಮಧ್ಯೆ ಭಾಗ್ಯಶ್ರೀ ಗಾರ್ಮೆಂಟ್ ಕೆಲಸಕ್ಕೆ ಸೇರಿಕೊಂಡಿದ್ದಲ್ಲದೆ, ರಿಯಾಜ್ ನನ್ನ ಅವೈಡ್ ಮಾಡಿದ್ಳು. ಗಾರ್ಮೆಂಟ್ ವ್ಯಾನ್ ಡ್ರೈವರ್ ಜೊತೆ ಸಂಬಂಧ ಬೆಳೆಸಿಬಿಟ್ಟಿದ್ಳು. ಇದೇ ವಿಚಾರವಾಗಿ ರಿಯಾಜ್ ಮತ್ತು ಭಾಗ್ಯಶ್ರೀ ನಡುವೆ ಹಲವು ಬಾರಿ ಜಗಳವಾಗಿತ್ತು.
ರಿಯಾಜ್ ಮಾತಿಗೆ ಭಾಗ್ಯಶ್ರೀ ಡೋಂಟ್ ಕೇರ್ ಮಾಡಿದ್ಳು. ಇದರಿಂದ ಸೇಡು ತೀರಿಸಿಕೊಳ್ಳಲು ಮುಂದಾದ ರಿಯಾಜ್ ಆಕೆಯನ್ನ ಚಾಕುವಿನಿಂದ ತಿವಿದು ಕೊಲೆ ಮಾಡಿಯೇ ಬಿಟ್ಟ. ಹಂತಕ ಈಗ ಜೈಲು ಸೇರಿದ್ದಾನೆ. ಪರಪುರುಷನ ತೆಕ್ಕೆಗೆ ಬಿದ್ದ ತಪ್ಪಿಗೆ ಪ್ರಾಣವನ್ನೇ ಕಳೆದುಕೊಂಡ್ಳು ಭಾಗ್ಯಶ್ರೀ.
PublicNext
27/05/2022 10:37 am