ಬೆಂಗಳೂರು: ಟ್ಯಾಂಕರ್ ವಾಹನ ಹರಿದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬೆಂಗಳೂರಿನ ಸರ್ಜಾಪುರ ರೋಡ್ ಸೆರಿನಿಟಿ ಲೇಔಟ್‌ನ ಶ್ವೇತ ರೆಸಿಡೆನ್ಸಿ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಮೂರು ವರ್ಷ ವಯಸ್ಸಿನ ಪ್ರತಿಷ್ಟ ಎಂಬ ಬಾಲಕ ಮೃತಪಟ್ಟಿದ್ದಾನೆ. ಅಪಾರ್ಟ್ಮೆಂಟ್‌ಗೆ ತಂದಿದ್ದ ನೀರು ಅನ್ ಲೋಡ್ ಮಾಡಿ ರಿವರ್ಸ್ ತೆಗೆಯುವ ಚಾಲಕ ಹಿಂಬದಿ ಗಮನಿಸಿಲ್ಲ ಎನ್ನಲಾಗಿದೆ. ಪರಿಣಾಮ ಚಕ್ರದಡಿ ಸಿಲುಕಿದ ಬಾಲಕ ಪ್ರಾಣ ಪಕ್ಷಿ ಹಾರಿ ಹೋಗಿದೆ. ಹೆಚ್ಎಸ್ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
26/05/2022 04:05 pm