ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದು 16 ದಿನಗಳ ಬಳಿಕ ಸೈಕೋಪಾಥ್ ನಾಗ ಕೊನೆಗೂ ಪೊಲೀಸ್ರ ಬಲೆಗೆ ಬಿದ್ದಿದ್ದಾನೆ. 16 ದಿನ ನಾಗನ ಪತ್ತೆಗೆ ಪೊಲೀಸ್ರು ಮಾಡಿದ ಕಸರತ್ತು ಒಂದೆರಡಲ್ಲ.
ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಬಿಡದ ನಾಗನ ಪತ್ತೆಗೆ ಪೊಲೀಸರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಫೋನ್, ಎಟಿಎಂ ಕಾರ್ಡ್, ಫೋನ್ ಪೇ ಇಂಟರನೆಟ್ ಕಾಲ್ ಬಳಸಿದ್ರೆ ಪೊಲೀಸ್ರು ಟೆಕ್ನಿಕಲ್ ಆ್ಯಂಗಲ್ ನಲ್ಲಿ ಆರೋಪಿಯನ್ನ ಪತ್ತೆ ಮಾಡ್ತಾರೆ.
ಆದ್ರೆ ಆ್ಯಸಿಡ್ ನಾಗ ತಾನು ಬಲೆಗೆ ಬೀಳೋ ಭಯದಲ್ಲಿ ಇದ್ಯಾವೂದನ್ನು ಬಳಸಿರ್ಲಿಲ್ಲ.ಇದೇ ಕಾರಣಕ್ಕೆ ಕಾಮಕ್ಷಿಪಾಳ್ಯ ಪೊಲೀಸ್ರು ಬೇಸಿಕ್ ಪೊಲೀಸಿಂಗ್ ಮೊರೆ ಹೋಗಿದ್ದು. ಈ ಬೇಸಿಕ್ ಪೊಲೀಸಿಂಗ್ ನಲ್ಲಿ ಟೆಕ್ನಿಕಲ್ ಆಧಾರ ಇಲ್ಲದೆ ಆರೋಪಿಯ ಫೋಟೊ ಹಿಡಿದು ಹುಡುಕೋದು. ಕರ ಪತ್ರ ಹಂಚೋದು ಮಾದ್ಯಮ ಪ್ರಕಟಣೆ ಹೊರಡಿಸೋದು ಅಕ್ಕ ಪಕ್ಕದ ಜಿಲ್ಲೆ ರಾಜ್ಯದಲ್ಲಿ ಕುದ್ದು ಪೊಲೀಸ್ರು ತೆರಳಿ ಹುಡುಕಾಟ ನಡೆಸ್ತಾರೆ.
ಇದೇ ಬೇಸಿಕ್ ಪೊಲೀಸಿಂಗ್ ನಿಂದ ಇಂದು ನಾಗೇಶನ ಬಂಧನವಾಗಿದೆ.
ತಿರುವಣ್ಣಮಲೈ ಸೇರಿದಂತೆ ಹಲವು ಕಡೆ ಪೊಲೀಸ್ರು ಬಿತ್ತಿ ಪತ್ರ ಅಂಟಿಸಿದ್ರು. ಬಿತ್ತಿ ಪತ್ರ ನೋಡಿ ಪೊಲೀಸ್ರಿಗೆ ಸ್ಥಳೀಯರು ಮಾಹಿತಿ ಕೊಟ್ಟಿದ್ರು. ಸರ್ ಈ ಫೋಟದಲ್ಲಿರೋ ವ್ಯಕ್ತಿ ಇಲ್ಲೇ ಇದ್ದಾನೆ ಅವನ ಕೈಮೇಲೆ ಸುಟ್ಡಗಾಯವಾಗಿದೆ ಅಂತ, ಸ್ಥಳೀಯರ ಮಾಹಿತಿ ಆಧರಿಸಿ ತಿರುವಣ್ಣಾಮಲೈ ನಲ್ಲಿ ನಾಗನನ್ನು ಪೊಲೀಸ್ರು ಬಂಧಿಸಿದ್ದಾರೆ.
ಇನ್ನೂ ಆಶ್ರಮದಲ್ಲಿ ಸ್ವಾಮಿಜಿ ವೇಷ ಧರಿಸಿ ಏನಾದ್ರೂ ಕೆಲಸ ಕೊಡಿ ಮಾಡ್ಕಿಕೊಂಡು ಇರ್ತಿನಿ ಅಂತ ಒಳ್ಳೆಯವನ ರೀತಿ ನಟನೆ ಮಾಡಿಕೊಂಡಿದ್ದ ಪಾಪಿಯನ್ನು ನಿನ್ನೆ ಕಾಮಕ್ಷಿಪಾಳ್ಯ ಪೊಲೀಸ್ರು ಆತನನ್ನು ಬಂಧಿಸಿ ನಗರಕ್ಕೆ ಕರೆದುಕೊಂಡು ಬರುವಾಗ ಮೂತ್ರವಿಸರ್ಜನೆ ನೆಪ ಹೇಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಕಾಮಾಕ್ಷಿಪಾಳ್ಯ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ.
ಬಲಗಾಲಿಗೆ ಗುಂಡು ತಿಂದಿರುವ ನಾಗೇಶ್ ರಾಜರಾಜೇಶ್ವರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯಿಂದ ಹಲ್ಲೆಗೊಳಗಾದ ಕಾನ್ ಸ್ಟೇಬಲ್ ಮಹಾದೇವಯ್ಯ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
14/05/2022 10:38 am